ಇಂದು ಸರ್ವಧರ್ಮ ಸಮ್ಮೇಳನ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.29
ನಗರದ ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಡಾ. ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಧರ್ಮ ಮತ್ತು ಮಾನವೀಯತೆ ವಿಷಯ ಕುರಿತು ಸರ್ವಧರ್ಮ ಸಮ್ಮೇಳನ ಮಾ.30ರಂದು ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಮಾಜಿ ಶಾಸಕ ಮಾರುತಿರಾವ ಮಾಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಗುಲ್ಬರ್ಗದ ಪಂ. ಪ್ರಸನ್ನಾಚಾರ್ಯ ಗುರಾಚಾರ್ಯ ಜೋಶಿ ಅವರು ಹಿಂದೂ ಧರ್ಮ ಮತ್ತು ಮಾನವೀಯತೆ ವಿಷಯ ಕುರಿತು ಮಾತನಾಡಲಿದ್ದಾರೆ.
ಅಣದೂರ ಬುದ್ಧ ವಿಹಾರದ ಭಂತೇಜಿ ಜ್ಞಾನಸಾಗರ ಅವರು ಬೌದ್ಧ ಧಮ್ಮ ಮತ್ತು ಮಾನವೀಯತೆ, ಸೇಂಟ್ ಮೇರಿ ಚರ್ಚ್ನ ಧರ್ಮಗುರು ಫಾ. ವಿಕ್ಟರ್ ಮಚಾದೋ ಅವರು ಕ್ರೈಸ್ತ ಧರ್ಮ ಮತ್ತು ಮಾನವೀಯತೆ, ಮಳಖೇಡ ಸಜ್ಜಾದೆ ನಸೀನ್ ದರ್ಗಾದ ಸೈಯದ್ ಶಹಾ ಮುಸ್ತಫಾ ಖಾದ್ರಿ ಅವರು ಇಸ್ಲಾಂ ಧರ್ಮ ಮತ್ತು ಮಾನವೀಯತೆ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಗುರುದ್ವಾರ ಗುರುನಾನಕ ಮಠದ ಅಧ್ಯಕ್ಷ ಎಸ್. ಅಮರಸಿಂಗ್ ಅವರು ಸಿಖ್ ಧರ್ಮ ಮತ್ತು ಮಾನವೀಯತೆ, ಸುಲಫಲ ಮಠದ ಮಹಾಂತ ಶಿವಾಚಾರ್ಯರು ವೀರಶೈವ ಧರ್ಮ ಮತ್ತು ಮಾನವೀಯತೆ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಿವಲೀಲಾ ಅಕ್ಕ ಅವರು ಬ್ರಹ್ಮಕುಮಾರಿ ಈಶ್ವರೀಯ ದೃಷ್ಟಿಯಲ್ಲಿ ಮಾನವೀಯತೆ ವಿಷಯ ಕುರಿತು ಹಾಗೂ ಬೇಲೂರು ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಲಿದ್ದಾರೆ.
ಪ್ರಾಚಾರ್ಯ ಡಾ. ಬಸವರಾಜ ಕುಮ್ಮೂರು, ಡಾ. ಮಲ್ಲಿಕಾರ್ಜುನ ಖರ್ಗೆ, ಡಾ. ಜಿ.ಎಂ. ಲಿಬಾರೆ, ಡಾ. ಐ.ಎಸ್. ವಿದ್ಯಾಸಾಗರ, ಡಾ. ಬಿ. ಕೃಷ್ಣಪ್ಪ ನೇತೃತ್ವ ವಹಿಸಲಿದ್ದಾರೆ.