ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗುರುಮಠಕಲ್: ಸಮಾಜವಾದಿ ಪಕ್ಷದ ಕಾರ್ಯಾಲಯ ಉದ್ಘಾಟನೆ

Rashmi Kasaragodu
Updated On : 30 Mar 2013, 12:29 pm

ಗುರುಮಠಕಲ್: ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸತ್ಯನಾರಾಯಣ ಯಾದವ್ ಅವರು ಶುಕ್ರವಾರ ಇಲ್ಲಿನ ಸಾಯಿ ನಗರದಲ್ಲಿ ಪಕ್ಷದ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿದರು.
  ನಂತರ ಮಾತನಾಡಿದ ಸತ್ಯನಾರಾಯಣ ಯಾದವ್, ಗುರುಮಠಕಲ್ ಮತಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸಮಾಜವಾದಿ ಪಕ್ಷವನ್ನು ಬೆಂಬಲಿಸಿ ಪಕ್ಷದ ಅಭ್ಯರ್ಥಿ ಗೆಲವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
  ಜಿಲ್ಲಾ ಮಹಿಳಾ ಘಟಕದ ಬಿ.ಪದ್ಮಾವತಿ, ನಗರ ಅಧ್ಯಕ್ಷ ಲಕ್ಷ್ಮಣರಾಜ ಯಾದವ, ಬಿ.ರಾಘವ ರಡ್ಡಿ ಕೊಂಕಲ್, ಬಿ.ವೆಂಕಟಪ್ಪ, ಶೇಖರ ಚಪೆಟ್ಲಾ, ಕರಣರಡ್ಡಿ ಕೊಂಕಲ್, ಲಕ್ಷ್ಮಣ ಬಜಂತ್ರಿ, ಯಾದವ ಸಮಾಜದ ತಾಲೂಕು ಅಧ್ಯಕ್ಷ ನಾಗಪ್ಪ ಯಾದವ, ವೆಂಕಟೇಶ ಕಾಳಬೆಳಗುಂದಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement