ಭಕ್ತಸಾಗರದ ಸಮ್ಮುಖದಲ್ಲಿ ಕೃಷ್ಣದ್ವೈಪಾಯನ ಆರಾಧನೆ
ಸುರಪುರ: ಕೃಷ್ಣದ್ವೈಪಾಯನ ತೀರ್ಥರ ಮಠದಲ್ಲಿ ಶ್ರೀಮದ್ ಕಣ್ವ ಮಠದ ಮೋಕ್ಷಾರ್ಥಿ ಯತಿಗಳಾದ 1008 ಕೃಷ್ಣದ್ವೈಪಾಯನ ಯತಿಗಳ ಆರಾಧನಾ ಮಹೋತ್ಸವ ಭಕ್ತಸಾಗರದ ಸಮ್ಮುಖದಲ್ಲಿ ಸಂಭ್ರಮ ಸಡಗರದೊಂದಿಗೆ ಜರುಗಿತು. ಸಂಜೀವಾಚಾರ್ಯ ಗುಡಿ, ರಾಧಾಕೃಷ್ಣಾ ಜೋಷಿ, ವೆಂಕಟೇಶಾಚಾರ್ಯ ರಾಯನಪಾಳ್ಯ ಇವರು ಬೃಂದಾವನದ ಪೂಜಾ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಆರಾಧನಾ ಮಹೋತ್ಸವದ ನಿಮಿತ್ತ ಸಂಗೀತ ಕಾರ್ಯಕ್ರಮ ಜರುಗಿತು. ಸಂಘದ ಗೌರವಾಧ್ಯಕ್ಷ ಗೋಪಾಲಾಚಾರ್ಯ ಅಗ್ನಿಹೋತ್ರಿ, ತಾಲೂಕು ಸಮಗ್ರ ಬ್ರಾಹ್ಮಣ ಸಂಘದ ಅಧ್ಯಕ್ಷ ಭೀಮಸೇನರಾವ ರವಡಕುಂದಿ, ಪ್ರಮುಖರಾದ ಕೃಷ್ಣಾಚಾರ್ಯ ದೇವರು, ತಿರುಮಲರಾವ್ ಅರಳಹಳ್ಳಿ, ಅಶೋಕ ಹೆಮನೂರು, ರಾಘವೇಂದ್ರಾಚಾರ್ಯ ಹಳ್ಳದ, ಯಾಜ್ಞಾವಲ್ಕ್ಯ ಸಂಘದ ಅಧ್ಯಕ್ಷ ಅಪ್ಪಣ್ಣ ಕುಲಕರ್ಣಿ, ಭೀಮಸೇನಾಚಾರ್ಯ ಜೋಷಿ, ರಾಘವೇಂದ್ರಾಚಾರ್ಯ ಸಾಂತಪುರ, ಶ್ರೀನಾಥ ಸಿಂಧುಗಿರಿ, ಚಂದ್ರಕಾಂತ ನಾಡಗೌಡ, ರಾಘವೇಂದ್ರಚಾರ್ಯ ನಾಗರಹಾಳ ಜೋಷಿ ಇತರರು ಇದ್ದರು.