ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಭಾಷೆ ಜನಾಂಗಗಳ ಜೀವಂತಿಕೆ ಸಂಕೇತ'

Rashmi Kasaragodu
Updated On : 30 Mar 2013, 12:29 pm

ಶಹಾಪುರ: ಭಾಷೆ ಜನಾಂಗಗಳ ಜೀವಂತಿಕೆಯ ಸಂಕೇತವಾಗಿದೆ. ಅಭಿವ್ಯಕ್ತಿಯ ಗಡಸುತನ, ಸಾಮರ್ಥ್ಯ ಇರುವುದು ಭಾಷೆಯಲ್ಲಿ ಮಾತ್ರ. ಇಂತಹ ಭಾಷೆ ಕಳೆದುಕೊಂಡರೆ ಜನಾಂಗಗಳೇ ಕಳೆದುಕೊಂಡಂತೆ. ಅದ್ದರಿಂದ ಕಲಿಯುವ ಭಾಷೆ ಮತ್ತು ಕಲಿತ ಭಾಷೆ ಒಂದೇ ಆಗಿರಬೇಕೆಂದು ಸಾಹಿತಿ ಸೂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
 ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದ ಗೋಗಿ ವಲಯ ಕನ್ನಡ ಸಾಹಿತ್ಯ ಪರಿಷತ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನಪದ ಭಾಷೆ ಸಂಸ್ಕೃತಿಯಲ್ಲಿ ಮಾನವನ ಶ್ರೇಷ್ಠ ಬದುಕು ಇದೆ. ಮಾನವೀಯ ಮೌಲ್ಯಗಳಿವೆ. ಅಂತಹ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳಸಲು ಪ್ರಯತ್ನಗಳು ಹೆಚ್ಚಾಗಬೇಕಿದೆ. ಜಾನಪದ ಕತೆ, ಹಾಡು, ನಾಟಕ, ನೃತ್ಯ, ಸಂಗೀತ ವಿವಿಧ ಕ್ರೀಡೆಗಳನ್ನು ಉಳಿಸಿ ಬೆಳಸಲು ಪರಿಷತ್ ಹೆಚ್ಚು ಕ್ರಿಯಾಶೀಲವಾಗಬೇಕೆಂದು ಕರೆ ನೀಡಿದರು.
 ಸಿದ್ದಲಿಂಗಣ್ಣ ಆನೇಗುಂದಿ ಮಾತನಾಡಿ, ಗ್ರಾಮಾಂತರ ಪ್ರದೇಶದ ಪ್ರತಿಭೆಗಳನ್ನು ಗುರುತಿಸಲು ವಲಯ ಸಾಹಿತ್ಯ ಪರಿಷತ್ ಪ್ರಯತ್ನಿಸುತ್ತಿದೆ ಎಂದರು.
 ಗೋಗಿ ವಲಯದ ದೇವಿಂದ್ರಪ್ಪ ಗೋನಾಲ ಅಧ್ಯಕ್ಷತೆ ವಹಿಸಿದ್ದರು. ಸಂಶೋಧಕ ಡಾ. ಡಿ.ಎನ್. ಅಕ್ಕಿ, ಚಂದ್ರಶೇಖರ ಭಾವಿ, ಚಂದ್ರಕಾಂತ ಕರದಳ್ಳಿ, ಬಸವರಾಜ ಸಗರ, ಶಿವಣ್ಣ ಇಜೇರಿ, ಮಾಣಿಕರೆಡ್ಡಿ ಶಿರಡ್ಡಿ, ಚಂದಪ್ಪ ತಾಯಮಗೋಳ್, ಬಸವರಾಜಪ್ಪಗೌಡ ತಂಗಡಗಿ, ಲಿಂಗಪ್ಪ ಯಾತನೂರ ಮೊದಲಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement