ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿದ್ಯುತ್ ಸ್ಪರ್ಶ: ಸಾವು

Rashmi Kasaragodu
Updated On : 30 Mar 2013, 12:30 pm

ಶಹಾಪುರ: ವಿದ್ಯುತ್ ಕಂಬದಿಂದ ಕಡಿದು ಬಿದ್ದಿದ್ದ ತಂತಿ ಸ್ಪರ್ಶಿಸಿ ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಚಾಮನಾಳ ಗ್ರಾಮದ ಮೇಲಿನ ತಾಂಡಾದಲ್ಲಿ ಶುಕ್ರವಾರ ಜರುಗಿದೆ. ಶಿಲ್ಪಾ ಚತುರು ರಾಠೋಡ(18) ಮೃತ ಯುವತಿ. ಶುಕ್ರವಾರ ಬೆಳಗ್ಗೆ ಹೊಲಕ್ಕೆ ಹೋಗುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಕಾಣದೇ ತುಳಿದದ್ದರಿಂದ ಈ ಘಟನೆ ಜರುಗಿದೆ. ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪಿಎಚ್ಡಿ ಪ್ರದಾನ
ಸುರಪುರ: ತಾಲೂಕಿನ ವೆಂಕಟಾಪುರ ಮೌನೇಶ್ವರ ಶ್ರೀನಿವಾಸ ಮಂಡಿಸಿದ ಭಾರತದ ಸಮ್ಮಿಶ್ರ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ ಎಂಬ ಪ್ರಬಂಧಕ್ಕೆ ಗುವಿವಿ ಪಿಎಚ್ಡಿ ಪ್ರದಾನ ಮಾಡಿದೆ. ಈಚೆಗೆ ಗುವಿವಿಯಲ್ಲಿ ಜರುಗಿದ ಘಟಿಕೋತ್ಸವದಲ್ಲಿ ಮೌನೇಶ್ವರ ಅವರಿಗೆ ಪಿಎಚ್ಡಿ ಪ್ರದಾನ ಮಾಡಲಾಯಿತು. ಡಾ.ಎಸ್.ಎ. ಪಾಳೇಕರ್ ಮಾರ್ಗದರ್ಶನ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement