ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೃಷಿ ಉತ್ಪನ್ನ ಖರೀದಿಗೆ ಸೂಕ್ತ ವ್ಯವಸ್ಥೆ

Rashmi Kasaragodu
Updated On : 31 Mar 2013, 12:59 pm

ಕನ್ನಡಪ್ರಭ ವಾರ್ತೆ, ಸುರಪುರ, ಮಾ.30
ಆಧುನಿಕ ಬೇಸಾಯ ಪದ್ಧತಿಗೆ ಹೊಂದಿಕೊಂಡಿರುವ ರೈತರು ಸಾವಯವ ಕೃಷಿಗೆ ಒಗ್ಗಿಕೊಳ್ಳುತ್ತಿಲ್ಲ. ಇದರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಗದ ಕಾರಣ ರೈತರು ಸಾವಯವ ಕೃಷಿಗೆ ಮುಂದೆ ಬರುತ್ತಿಲ್ಲ ಎಂಬ ಮಾಹಿತಿ ಗಮನಕ್ಕೆ ಬಂದಿದೆ. ಇನ್ನು ಮುಂದೆ ಸಾವಯವ ಕೃಷಿ ಉತ್ಪನ್ನಗಳನ್ನು ಖರೀದಿಸಲು ನಮ್ಮ ಸಂಘಟನೆಯಿಂದ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬೆಂಗಳೂರಿನ ಇಕೋ ರಿಸರ್ಚ್ ಸೆಂಟರ್ ವ್ಯವಸ್ಥಾಪಕ ಯೋಗೇಶ್ವರ ಹೇಳಿದರು.
  ತಾಲೂಕಿನ ಹೆಗ್ಗನದೊಡ್ಡಿ ಗ್ರಾಮದ ಲಾಡ್ಲೆ ಪಟೇಲರ ಜಮೀನಿನಲ್ಲಿ ಬೆಂಗಳೂರಿನ ಇಕೋ ರಿಸರ್ಚ್ ಸೆಂಟರ್ ಮತ್ತು ಯುವ ಮಾನವ ಹಕ್ಕುಗಳ ಸಂಘಟನೆ ತಾಲೂಕು ಘಟಕ ಸಂಯುಕ್ತವಾಗಿ ರೈತರಿಗಾಗಿ ಏರ್ಪಡಿಸಿದ್ದ ಶಿಬಿರದಲ್ಲಿ ಅವರು ಮಾತನಾಡಿದರು.
ರೈತರಿಗೆ ನಷ್ಟ: ಆಧುನಿಕ ಬೇಸಾಯಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ, ಆದರೆ ಲಾಭ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ರಸಗೊಬ್ಬರಗಳ ಬೆಲೆ ಹೆಚ್ಚಳದಿಂದ ರೈತ ನಷ್ಟ ಅನುಭವಿಸುತ್ತಿದ್ದಾನೆ. ಕಾರಣ ಅತ್ಯಂತ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಬರುವ ಸಾವಯವ ಕೃಷಿಯತ್ತ ರೈತರು ಗಮನ ಹರಿಸಬೇಕು ಎಂದರು.
  ಈ ಬೇಸಾಯದಿಂದ ಬರುವ ಉತ್ಪನ್ನಗಳಲ್ಲಿ ಹೇರಳವಾಗಿ ಪೌಷ್ಟಿಕಾಂಶ ಇರುತ್ತದೆ. ಹೀಗಾಗಿ ಇದು ಆರೋಗ್ಯಕ್ಕೂ ಒಳ್ಳೆಯದು. ಸಾವಯವ ಕೃಷಿಗೆ ರೈತರು ಹೆಚ್ಚಿನ ಶ್ರಮ ವಹಿಸುವ ಅಗತ್ಯವಿಲ್ಲ. ನಿಮ್ಮ ತಿಪ್ಪೆ ಗೊಬ್ಬರವನ್ನೆ ಬಳಸಬಹುದು. ಇದಕ್ಕೆ ದೇಶಿ ಹಸುಗಳನ್ನು ಬಳಸಿಕೊಳ್ಳುವುದು ಇನ್ನಷ್ಟು ಉತ್ತಮ ಎಂದು ವಿವರಿಸಿದರು.
ಪ್ರಮಾಣಪತ್ರ ವಿತರಣೆ: ಫೌಂಡೇಶನ್ ಸಂಯೋಜಕ ಎನ್.ಸೋಮಶೇಖರ ಮಾತನಾಡಿ, ದೇಶೀ ತಳಿಗಳ ಮಹತ್ವ ಮತ್ತು ಜೀವ ಚೈತನ್ಯ, ಕಾಂಪೋಸ್ಟ್, ಪಂಚ ದ್ರವರೂಪದ ಗೊಬ್ಬರ ಸಿದ್ಧಪಡಿಸುವ ಕುರಿತು ಹಲವಾರು ಪ್ರಾತ್ಯಕ್ಷಿಕೆಗಳನ್ನು ತೋರಿಸಿ ರೈತರಿಗೆ ಮನವರಿಕೆ ಮಾಡಿಕೊಟ್ಟರು. ಸುಮಾರು 60 ಜನ ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
  ಮಾನವ ಹಕ್ಕುಗಳ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಶಿವರಾಜ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಪ್ರಗತಿಪರ ರೈತರಾದ ರಾಜೇಂದ್ರ ಪಾಟೀಲ, ಲಾಡ್ಲೆ ಪಟೇಲ, ಪಿಡ್ಡಪ್ಪ ದೊರಿ, ಅಯ್ಯಣ್ಣ ಹಾಲಭಾವಿ, ಬೀಮಣ್ಣಗೌಡ ಕಿರದಳ್ಳಿ, ಸಿದ್ದಣ್ಣ ಸಾವು, ಮಕ್ಬೂಲ್ ಪಟೇಲ್, ಅಂಭ್ರೇಶ ನಾಯಕ, ಹಣಮಂತರಾಯ ಮೇಟಿ, ದೇವು ದೊರಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement