ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಿಲ್ಲಾ ಕುಂಬಾರರ ಸಮಾಜ ಉದ್ಘಾಟನೆ

Lingaraj Badiger
Updated On : 1 Apr 2013, 11:30 am

ಯಾದಗಿರಿ: ಜಿಲ್ಲೆಯಲ್ಲಿ ಕುಂಬಾರ ಸಮಾಜದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ಇದಕ್ಕೆ ಅನಕ್ಷರತೆ ಹಾಗೂ ಅಸಂಘಟಿತರಾಗಿರುವುದೇ ಮೂಲ ಕಾರಣ ಎಂದು ಇತ್ತೀಚೆಗೆ ಸಮಾಜದ ಜಿಲ್ಲಾಧ್ಯಕ್ಷರಾಗಿ  ಅವಿರೋಧವಾಗಿ ಆಯ್ಕೆಯಾದ ಶೇಖರಪ್ಪ ಅರ್ಜುಣಗಿ ಅಭಿಪ್ರಾಯಪಟ್ಟರು. ನಗರದಲ್ಲಿ ಜಿಲ್ಲಾ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿಯಡಿಯಲ್ಲಿ ಹಲವಾರು ಯೋಜನೆಗಳಿದ್ದು, ಅದು ಅರ್ಹ ಕುಂಬಾರರಿಗೆ ಸಿಗದೇ ಅನ್ಯರ ಪಾಲಾಗುತ್ತಿರುವುದು ವಿಷಾದನಿಯ ಎಂದು ಹೇಳಿದರು. ಗುರುಬಸಪ್ಪ ಹಾಲಗೇರಾ ಮಾತನಾಡಿ, ಒಗ್ಗಟ್ಟಿನೊಂದಿಗೆ ಸಮಾಜಕ್ಕೆ ಸಿಗುವ ಸೌಲಭ್ಯಗಳನ್ನು ಪಡೆಯಲು ಮುಂದಾಗೋಣ. ಅದಕ್ಕಾಗಿ ಮೊದಲು ಎಲ್ಲರೂ ಸಂಘಟಿತರಾಗಬೇಕು ಎಂದರು. ಕುಂಬಾರರ ಸಮಾಜದ ಜಿಲ್ಲಾ ಉಪಾಧ್ಯಕ್ಷರಾಗಿ ಶಿವಶಂಕರ ಮುದ್ನಾಳ, ಪ್ರಧಾನ ಕಾರ್ಯದರ್ಶಿ ಸಾಬಣ್ಣ ಹೊಸಳ್ಳಿ, ಸಹ ಕಾರ್ಯದರ್ಶಿಯಾಗಿ ಈರಣ್ಣ ವಡಗೇರಾ, ಖಜಾಂಚಿಯಾಗಿ ದೇವಿಂದ್ರಪ್ಪ ಬಿ.ಮುದ್ನಾಳ, ಸದಸ್ಯರಾಗಿ ಗಾಲೆಪ್ಪ ಬೆಳಗೇರಾ, ಭೀಮಪ್ಪ ಕೊಡಾಲ, ಕಾಶಪ್ಪ ಪೊಲೀಸ್, ಮಾಣಿಕಪ್ಪ ಪೊಲೀಸ್, ಪರಮಣ್ಣ ನಾಯ್ಕಲ್, ನಾಗಪ್ಪ ಹೊನಗೇರಾ, ದೊಡ್ಡಪ್ಪ ಹಳಗೇರಾ, ಭೀಮರಾಯ ಹುಳಗೋಳ, ಶಿವರಾಜ ಕೊಂಕಲ್, ಹೊನ್ನಪ್ಪ ಗೋಂದೆನೂರ, ಸಾಬಣ್ಣ ಹೊಸಳ್ಳಿ, ಸಾಬಯ್ಯ ನೇಮಕಗೊಂಡಿದ್ದಾರೆ. ದೇವಿಂದ್ರಪ್ಪ ಬಿ.ಮುದ್ನಾಳ ವಂದಿಸಿದರು, ರಾಜೆಂದ್ರಕುಮಾರ ಮುದ್ನಾಳ ನಿರೂಪಿಸಿದರು.
ಸಂಹಿತೆ ಉಲ್ಲಂಘನೆ: ಪ್ರಕರಣ ದಾಖಲು
ಯಾದಗಿರಿ: ಜಿಲ್ಲಾದ್ಯಂತ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಯಾದಗಿರಿ ನಗರದ ವಾರ್ಡ್ ಸಂಖ್ಯೆ 28ರ ಮದನಪುರ ಪ್ರದೇಶದಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಗುತ್ತಿಗೆದಾರರಾದ ಸುನೀಲ್ ಅರಕೇರಿ ಅವರ ಮೇಲೆ ಭಾನುವಾರ ಪ್ರಕರಣ ದಾಖಲಾಗಿದೆ. ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 28ನೇ ವಾರ್ಡಿನಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ನಗರಸಭೆ ಮಾಜಿ ಸದಸ್ಯ ಅಬ್ದುಲ್ ಕರೀಂ ಅವರು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಪರಿಶೀಲಿಸಿ ಪ್ರಕರಣ ದಾಖಲು: ಪರಿಶೀಲನೆಗೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿರುವ ಬಗ್ಗೆ ಪರಿಶೀಲಿಸಲು ಚುನಾವಣೆ ಜಾಗೃತ ದಳಕ್ಕೆ ಸೂಚಿಸಲಾಗಿತ್ತು. ಅಭಿಯಂತರ ರಾಘವೇಂದ್ರ ಅವರ ನೇತೃತ್ವದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಕಾಮಗಾರಿ ಕೈಗೊಂಡು ಚುನಾವಣೆ ಸಂಹಿತೆ ಉಲ್ಲಂಘನೆಯಾಗುತ್ತಿರುವ ಕಂಡುಬಂತು. ಆದ್ದರಿಂದ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರ ಸುನೀಲ್ ಅರಕೇರಿ ಮೇಲೆ ಜಾಗೃತಿ ದಳದಿಂದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement