ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'5 ವರ್ಷದ ಬಿಜೆಪಿ ಸಾಧನೆ ಅದ್ವಿತೀಯ'

Lingaraj Badiger
Updated On : 2 May 2013, 11:25 am

ಕ.ಪ್ರ. ವಾರ್ತೆ, ಸೇಡಂ,  ಮೇ.1
50 ವರ್ಷಗಳ ಕಾಲ ಸತತ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಮಾಡಿರದಂತಹ ಸಾಧನೆಯನ್ನು ಕೇವಲ 5 ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎಂದು ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ ಪತ್ನಿ ಸಂತೋಷರಾಣಿ ತಿಳಿಸಿದರು.
ನಿಡಗುಂದಾ ಗ್ರಾಮದಲ್ಲಿ ಪತಿಯ ಪರ ಮತಯಾಚಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಮನೆ ಮಾತಾಗಿದೆ. ಅದರಂತೆ ರಾಜಕುಮಾರ ಪಾಟೀಲ್ ತೇಲ್ಕೂರ ಸಹ ಜನೋಪಯೋಗಿ ಕೆಲಸ ಮಾಡಲು ಉತ್ಸುಕರಾಗಿದ್ದು, ಅವರಿಗೆ ಆಶೀರ್ವದಿಸುವಂತೆ ಕೋರಿದರು.
ವೆಂಕಟೇಶ ಜಡಾಲ ಮಾತನಾಡಿ, ಸರಳ ಸಜ್ಜನಿಕೆಯ ಸ್ವಭಾವ ಹೊಂದಿರುವ ತೇಲ್ಕೂರ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಬಹುಮತದಿಂದ ಚುನಾಯಿತರನ್ನಾಗಿಸುವ ಮೂಲಕ ವಿಧಾನಸಭೆಗೆ ಕಳುಹಿಸಬೇಕು ಎಂದರು.
ಈರಮ್ಮ ಪಾಟೀಲ್ ಹೆಡ್ಡಳ್ಳಿ, ಗಂಗಾದೇವಿ ನಿಷ್ಠಿ, ಮಹಾನಂದ ಪಾಟೀಲ್ ತೇಲ್ಕೂರ, ಮಾಧವಿ ಪಾಟೀಲ್, ಜಗದೇವಿ ಕೋದಂಪುರ, ರೇಣುಕಾ ಕಪಾಳ, ಶಂಕರರಾವ ಜಡಾಲ್, ಶರಣಬಸಪ್ಪ ಕಾಳಾ, ಶಬನಾಬೇಗಂ, ರಯಿಸಾಬೇಗಂ ಮುಲ್ಲಾ, ಖಾಜಾಸಾಬ್ ಖುರೈಸಿ, ಬಸವರಾಜ ನಿಷ್ಠಿ, ಶರಣಯ್ಯ ಗುತ್ತೇದಾರ, ರಾಜು ಜಟ್ಟೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement