ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಗರದಲ್ಲಿ ಕೆಜೆಪಿ ಬಿರುಸಿನ ಪ್ರಚಾರ

Lingaraj Badiger
Updated On : 2 May 2013, 11:29 am

ಯಾದಗಿರಿ: ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಡಾ.ವೀರಬಸವಂತರಡ್ಡಿ ಮುದ್ನಾಳ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದಲ್ಲಿ ಪ್ರಚಾರ ಕೈಗೊಂಡರು.
ನಗರದ ಸ್ಟೇಷನ್ ಏರಿಯಾದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿದ ಅವರು, ಬಿಎಸ್‌ವೈ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಕೆಜೆಪಿಗೆ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು.
ರಾಜ್ಯ ಕಾರ್ಯದರ್ಶಿ ಡಾ.ಶರಣಭೂಪಾಲರಡ್‌ಡಿ ನಾಯ್ಕಲ್, ಡಾ.ಶರಣರಡ್ಡಿ ಕೋಡ್ಲಾ, ಜಿಪಂ ಮಾಜಿ ಅಧ್ಯಕ್ಷೆ ಡಾ.ಶೈಲಜಾ, ಸುನಿತಾ ಚವ್ಹಾಣ, ಬಸವಂತರಾಯಗೌಡ, ಭೀಮಣ್ಣಗೌಡ ಕ್ಯಾತನಾಳ, ವಿನೋದ ಜೈನ್ ಇತರರು ಇದ್ದರು.
ಕೆಜೆಪಿಗೆ ಸೇರ್ಪಡೆ: ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಅನಕಸೂಗೂರ ಮತ್ತು ಗುಂಡಳ್ಳಿ ತಾಂಡದ ಅನೇಕ ಕಾರ್ಯಕರ್ತರು ಡಾ.ವೀರಬಸವಂತರಡ್ಡಿ ಮುದ್ನಾಳ ಸಮ್ಮುಖದಲ್ಲಿ ಕೆಜೆಪಿಗೆ ಸೇರ್ಪಡೆಯಾದರು.
ಮಲ್ಲಿಕಾರ್ಜುನಗೌಡ ಅನಕಸೂಗೂರ, ಮಲ್ಲಪ್ಪ ಪೂಜಾರಿ, ಸಿದ್ದಲಿಂಗಪ್ಪಗೌಡ, ಮಲ್ಲಪ್ಪ ಪೂಜಾರಿ, ನಿಂಗಪ್ಪ ಮುರಡಿ, ರಘಿನಾಥರೆಡ್ಡಿ, ನಿಂಗಣ್ಣ ದೊಡ್ಡಮನಿ, ಸಹುಸನಪ್ಪ ಸುರಪುರ, ಮಾನಪ್ಪ ಅಗಸರ, ಮಡಿವಾಳ ಅಗಸರ, ನಿಂಗಪ್ಪ ಮಂಡ್ಲೇರ್, ಶರಣಪ್ಪ ಪೂಜಾರಿ, ಹಣಮಂತ್ರಾಯ ಕುಂಬಾರ, ರಾಜಾ ಕುಂಬಾರ, ವೆಂಕಟೇಶ ಜಾಲಗಾರ, ತುಳಜಪ್ಪ, ಸಂತೋಷ ಚವ್ಹಾಣ, ಅಶೋಕ, ಚನ್ನುರಾಠೋಡ, ಭೀಮುನಾಯಕ ರಾಠೋಡ್, ದೇಶನಾಯ್ಕ ಚವ್ಹಾಣ, ಶಂಕರ ಮಾಳಪ್ಪ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement