ಬಿಜೆಪಿಯಿಂದ ಅಶಾಂತಿ: ಕಾರಟ್
ಕ.ಪ್ರ. ವಾರ್ತೆ, ಶಹಾಬಾದ್ ಮೇ1
ಕಳೆದ ಐದು ವರ್ಷದಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕೋಮು ದ್ವೇಷ ಹುಟ್ಟು ಹಾಕಿ, ಅಲ್ಪಸಂಖ್ಯಾತ ಸಮುದಾಯ ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದೆ ಎಂದು ಸಿಪಿಐ (ಎಂ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಾರಟ್ ಆರೋಪಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಅಭ್ಯರ್ಥಿ ಮಾರುತಿ ಮಾನ್ಪಡೆ ಪರವಾಗಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಪ್ರತಿ ತಿಂಗಳಿಗೆ ಡಿಸೇಲ್, ಪೆಟ್ರೋಲ್ ಬೆಲೆ ಹೆಚ್ಚುಮಾಡುತ್ತಿದ್ದಾರೆ. ಕೇಂದ್ರದ ಈ ನೀತಿಯಿಂದ ಅನೇಕ ಕೃಷಿಕರ ಮಕ್ಕಳು ಒಪ್ಪೋತ್ತಿನ ಗಂಜಿಗೂ ಪರದಾಡಬೇಕಾಗಿದೆ, ಕೇಂದ್ರ ನೀತಿಯಿಂದ ಉದ್ಯೋಗವಿಲ್ಲದೆ ಯುವಕರ ಪರದಾಡುವಂತಾಗಿದೆ ಎಂದರು.
ಅಭ್ಯರ್ಥಿ ಮಾರುತಿ ಮಾನ್ಪಡೆ ಮಾತನಾಡಿ, ಕಳೆದ 40 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕೇಂದ್ರ ಮಂತ್ರಿ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಈ ಭಾಗದ ನಿರುದ್ಯೋಗ, ಬಡತನವನ್ನು ಹೋಗಲಾಡಿಸಲು ಕೈಗಾರಿಕೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಜಿ.ರಮೇಶ, ಧರ್ಮವೀರ ಚವ್ಹಾಣ, ಬಸವರಾಜ, ಕೀಶನಸಿಂಗ್ ಪವಾರ, ಬಸವರಾಜ, ವೀರಯ್ಯ ಸ್ವಾಮಿ, ಹಾಜೀಕರಿಮ ಖುರೇಶಿ, ಗೌರಮ್ಮ ಪಾಟೀಲ್, ವಸಂತ ಕಾಂಬಳೆ, ಶಿವಾಜಿ ಕುಸಾಳೆ, ನಾಗಪ್ಪ ಚಾಪನೂರ, ಶಿವುಕುಮಾರ ತಳವಾರ, ಭೀಮರಾವ, ಚಂದು ಜಾಧವ, ವಿಷ್ಣು ಜಾಧವ, ವಸಂತ ಜಾಧವ ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.