ಮತದಾನ ಜಾಗೃತಿಗೆ ಕ್ಯಾಂಡಲ್ ಮಾರ್ಚ್
ಯಾದಗಿರಿ: ಸ್ವೀಪ್ ಚಟುವಟಿಕೆ ಅಂಗವಾಗಿ ಸಾರ್ವಜನಿಕರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶುಕ್ರವಾರ ರಾತ್ರಿ ನಗರದಲ್ಲಿ ಏರ್ಪಡಿಸಿದ್ದ ಮಹಿಳೆಯರ ಜಾಗೃತಿ ಜಾಥಾ, ಬೀದಿ ನಾಟಕ ಹಾಗೂ ಮೇಣದ ಬತ್ತಿ ನಡಿಗೆ ರ್ಯಾಲಿಗೆ ಜಿಪಂ ಸಿಇಒ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಎಸ್.ಎ. ಜಿಲಾನಿ ಚಾಲನೆ ನೀಡಿದರು.
ನಗರದ ಮೈಲಾಪುರ ಅಗಸಿಯಿಂದ ಗಾಂಧಿ ಚೌಕದವರೆಗೆ ಕ್ಯಾಂಡಲ್ ಹಿಡಿದು ಮತದಾನ ಮಹತ್ವದ ಬಗ್ಗೆ ಜಾಗೃತಿ ರ್ಯಾಲಿ ನಡೆಸಲಾಯಿತು. ಗಾಂಧಿ ವೃತ್ತದಲ್ಲಿ ಮತದಾನದ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ, ಡಾ. ದೇಶಮಾನೆ, ಯುವಜನ ಕ್ರೀಡಾ ಇಲಾಖೆಯ ಉಪನಿರ್ದೇಶಕ ಸೂಗಪ್ಪ ಪಾಟೀಲ್ ಇತರರು ಇದ್ದರು.