ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಜಕೀಯ ವೈಷಮ್ಯ: ಎರಡು ಸಮುದಾಯ ಮಧ್ಯೆ ಸಂಘರ್ಷ

Mainashree
Updated On : 7 May 2013, 12:27 pm

ಕೆಂಭಾವಿ: ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸದಬ ಗ್ರಾಮದಲ್ಲಿ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ದಲಿತರು ಮತ್ತು ಸವರ್ಣೀಯರ ಮಧ್ಯೆ ಘರ್ಷಣೆ ಸಂಭವಿಸಿ, ಮೂವರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಚುನಾವಣೆಯ ಸಂದರ್ಭದಲ್ಲಿ ಗ್ರಾಮದ ಎರಡೂ ಗುಂಪುಗಳ ಮಧ್ಯೆ ಜಗಳ ಪ್ರಾರಂಭವಾಗಿತ್ತು. ನಂತರ ಗ್ರಾಮದ ಹಿರಿಯರು ಎರಡೂ ಗುಂಪುಗಳಿಗೆ ತಿಳಿ ಹೇಳಿ ವಾತವರಣ ತಿಳಿಗೊಳಿಸಿದ್ದರು. ಆದರೆ, ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸವರ್ಣೀಯರು ಮತ್ತು ದಲಿತರ ಮಧ್ಯೆ ಮತ್ತೆ ಕಲಹ ಪ್ರಾರಂಭವಾಗಿ ದಲಿತರ ಮೇಲೆ ದೌರ್ಜನ್ಯ ನಡೆದು ಅದು ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆಯಿತು. ಈ ಘಟನೆಯಲ್ಲಿ ಬಸವರಾಜ, ಪರಶುರಾಮ, ಯಮನಪ್ಪ ಗಾಯಗೊಂಡಿದ್ದು, ಕೆಂಭಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಎಸ್.ಡಿ ಕಟ್ಟಿಮನಿ ಪರಿಶೀಲಿಸಿದರು. ಎರಡೂ ಸಮುದಾಯಗಳ 31 ಜನರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ಈ ಘಟನೆಯ ಕುರಿತು ಗ್ರಾಮದ ಸವರ್ಣೀಯರು ಸೋಮವಾರ ಬೆಳಗ್ಗೆ ಕೆಂಭಾವಿ ಪೊಲೀಸ್ ಠಾಣೆಗೆ ಟ್ರಾಕ್ಟರ್, ಜೀಪ್‌ಗಳಲ್ಲಿ ಬಂದು ಜಮಾವಣೆಗೊಂಡರು. ಗ್ರಾಮದಲ್ಲಿ ದಲಿತರ ದೌರ್ಜನ್ಯ ಹೆಚ್ಚಾಗಿದ್ದು ನಮಗೂ ರಕ್ಷಣೆ ಕೊಡಬೇಕು.
ಗ್ರಾಮದಲ್ಲಿನ ಸವರ್ಣೀಯರು ನೆಮ್ಮದಿಯ ಬದುಕು ಸಾಗಿಸಲು ಆಗುತ್ತಿಲ್ಲ ಎಂದು ಎಂದು ಆರೋಪಿಸಿದರು. ಮಾಜಿ ಸಚಿವ ರಾಜುಗೌಡ ಸದಬ ಗ್ರಾಮದಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement