ತ್ವರಿತ ನ್ಯಾಯದಾನಕ್ಕೆ ವಕೀಲರ ಸಹಕಾರ ಅಗತ್ಯ
ಶಹಾಪುರ: ನ್ಯಾಯಾಧೀಶರಿಗೆ ಹೆಚ್ಚು ಸಮಯ ಕಲಿಕೆಯಲ್ಲೇ ಕಳೆದು ಹೊಗುತ್ತದೆ. ಅಷ್ಟೇ ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಹಿರಿಯ ವಕೀಲರು ತಮ್ಮ ಅನುಭವ, ಆಳವಾದ ಜ್ಞಾನದಿಂದ ವಾದ ಮಂಡಿಸಿದಾಗ ಹೆಚ್ಚಿನ ವಿಷಯ ನಮಗೆ ಗೊತ್ತಾಗುತ್ತದೆ. ತ್ವರಿತ ನ್ಯಾಯದಾನಕ್ಕೆ ವಕೀಲರ ಸಹಕಾರ ಅಗತ್ಯ ಎಂದು ನ್ಯಾ. ಸತೀಶ ಎಸ್.ಟಿ. ಹೇಳಿದರು.
ಪಟ್ಟಣದ ಕೋರ್ಟ್‌ನಲ್ಲಿ ಮಂಗಳವಾರ ನೂತನ ವಕೀಲರ ಪರಿಷತ್, ನಾಗರಿಕ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾನೂನನ್ನು ಗೌರವಿಸಿ: ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಅರಿವಿಗೆ ಬಂದಿದ್ದು, ಕಾನೂನು ಸೇವಾ ಸಮಿತಿ ಮೂಲಕ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಮಾಜ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯಬೇಕು. ಯಾರು ಕಾನೂನು ಗೌರವಿಸುತ್ತಾರೋ ಅವರಿಗೆ ಸದಾ ಕಾನೂನು ರಕ್ಷಣೆ ನೀಡುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಹಿರಿಯ ವಕೀಲ ಭಾಸ್ಕರರಾವ್ ಮುಡಬೂಳ ಮಾತನಾಡಿ, ನ್ಯಾಯಾದಾನ ಮಾಡುವಾಗ ತಾಳ್ಮೆ ಕಳೆದುಕೊಳ್ಳದೆ ಸಂಯಮದಿಂದ ವರ್ತಿಸುತ್ತಾ ಆತ್ಮವಿಶ್ವಾಸದಿಂದ ನ್ಯಾಯದಾನ ಮಾಡಿದರೆ ಯಶಸ್ವಿ ನ್ಯಾಯಾಧೀಶರಾಗಲು ಸಾಧ್ಯ. ಕಳೆದ ನಾಲ್ಕು ವರ್ಷದಿಂದ ಎಲ್ಲಾ ಹಿರಿಕಿರಿಯ ವಕೀಲರ ಜತೆ ಸಂಯಮ ಕಳೆದುಕೊಳ್ಳದೆ, ತೊಂದರೆ ನೀಡದೆ ನ್ಯಾಯಾದಾನ ಮಾಡಿದ್ದಾರೆ. ಅಸಮಧಾನದ ನಡುವೆ ಅವರನ್ನು ಬೀಳ್ಕೊಡುತ್ತಿದ್ದೇವೆ ಎಂದರು.
ಸನ್ಮಾನ: ಅಧ್ಯಕ್ಷತೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ವಸಂತ ಸುರಪುರಕರ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸರ್ಕಾರಿ ಅಭಿಯೋಜಕ ಎಸ್.ಎಚ್. ಹಕೀಂ, ನೂತನ ವಕೀಲರ ಪರಿಷತ್ ಅಧ್ಯಕ್ಷ ಶಿವಶರಣಪ್ಪ ಹೊತಪೇಟ, ಆರ್. ಚೆನ್ನಬಸು ವನದುರ್ಗ, ಟಿ. ನಾಗೇಂದ್ರ, ರಾಘವೇಂದ್ರ ಹಾರಣಗೇರಾ, ಉಮೇಶ ಕುಲಕಣ್ರಿ, ಶಿವಕುಮಾರ ಗುಬ್ಬಿ, ಅಮರೇಶ ಇಟಗಿ, ಸತ್ಯಮ್ಮ ಹೊಸ್ಮನಿ, ಸುಭಾಸ ರಾಂಪುರೆ, ತಮ್ಮಣ್ಣ ರಾಂಪುರ, ಪುರಸಭೆ ಮಾಜಿ ಅಧ್ಯಕ್ಷ ಸಣ್ಣ ನಿಂಗಪ್ಪ ನಾಯ್ಕೋಡಿ, ಡಾ.ಎಂ.ಎಸ್. ಸಿರವಾಳ, ನಾಗೇಂದ್ರಪ್ಪ ಇಟಗಿ, ಮಹಾದೇವಪ್ಪ ಸಾಲಿಮನಿ, ಮಲ್ಲಯ್ಯ ಪೊಲಂಪಲ್ಲಿ, ಬಸವರಾಜ ಕುಂಬಾರ, ಎಸ್.ಎಂ. ಸಾಗರ ಇತರರು ಇದ್ದರು.