ಶರಣರಿಂದ ಬದುಕಿಗೆ ಚಲನಶೀಲತೆ
ಕ.ಪ್ರ. ವಾರ್ತೆ, ಶಹಾಪುರ, ಮೇ 7
12ನೇ ಶತಮಾನದಲ್ಲಿ ಅಭೂತಪೂರ್ವ ಬದಲಾವಣೆಗೆ ಕಾರಣರಾದ ಬಸವಾದಿ ಶಿವಶರಣರು ತಮ್ಮ ಬದುಕನ್ನೆ ಒಂದು ಪವಾಡವನ್ನಾಗಿ ಮಾಡಿ ಧರೆಗೆ ದೊಡ್ಡವರಾಗಿದ್ದಾರೆ ಎಂದು ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ಪಟ್ಟಣದ ಡಾ. ಬಸವರಾಜ ರೇಖಾ ಹಾದಿಮನಿಯವರ ಮನೆಯಲ್ಲಿ ಮಡಿವಾಳ ಮಾಚಿದೇವರ ಜಯಂತಿಯ ನಿಮಿತ್ತ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ನಿಮ್ಮಂತೆಯೇ ಮನುಷ್ಯರಾಗಿ ಹುಟ್ಟಿ ಕಷ್ಟ ಕಾರ್ಪಣ್ಯ, ಮಾನ- ಅಪಮಾನ ಅನುಭವಿಸಿದವರು ಶರಣರು. ಸ್ವರ್ಗಲೋಕದಲ್ಲಿ ಇರುವವರೆಂದು ಹೇಳುತ್ತಿರುವ ದೇವಾನು ದೇವತೆಗಳಂತೆ ಇವರೂ ಎಂದೂ ಜಡವಾದವರಲ್ಲ. ತಮ್ಮ ವಿಚಾರಪರ ನಡಾವಳಿಗಳ ಮೂಲಕ ಬದುಕಿಗೊಂದು ಚಲನಶೀಲತೆಯನ್ನು ತಂದುಕೊಟ್ಟರು ಎಂದು ತಿಳಿಸಿದರು.
ಸನಾತನಿಗಳ ವಿರುದ್ಧ ಶರಣರ ಹೋರಾಟ: ಕಾಲಾನು ಕಾಲದಿಂದ ಜನತೆಯನ್ನು ಮೌಢ್ಯದ ಹುದುಲಲ್ಲಿ ಹುದುಗಿಸಿಟ್ಟು, ಅವರ ಮತಿಯನ್ನು ತಿಥಿ ಮಾಡಿಟ್ಟ ಈ ದೇಶದ ಸನಾತನಿಗಳ ವಿರುದ್ಧ ಬಸವಾದಿ ಶರಣರು ಹಿರಿದ ಕತ್ತಿಯಾಗಿ ಹೋರಾಟ ಮಾಡಿದರು. ಶರಣರ ಬದುಕು ಹಾಗೂ ಬರಹವನ್ನು ಹೇಗಾದರೂ ಸೈ ನಿಷ್ಕ್ರಿಯಗೊಳಿಸಬೇಕೆಂಬ ಹುನ್ನಾರವಿಟ್ಟುಕೊಂಡ ಪುರೋಹಿತವರ್ಗ ಇಂದಿಗೂ ಕ್ರಿಯಾಶೀಲವಾಗಿದೆ. ಈ ಮೂಲಕ ಶರಣರನ್ನು ವೈಭವೀಕರಿಸುತ್ತ ಹೊರಟಿದೆ. ಅವರೆಲ್ಲ ದೈವಾಂಶಸಂಭೂತರು ಎಂದು ಹೇಳಿ ಜನ ಸಾಮಾನ್ಯರಿಂದ ಅವರನ್ನು ದೂರವಿಡುವ ಕ್ರಿಯೆ ಅತ್ಯಂತ ಸೂಕ್ಷ್ಮವಾಗಿ ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಠ- ಮಾನ್ಯಗಳು, ಗುಡಿ- ಗುಂಡಾರಗಳು ಇಲ್ಲದ ಸಮಾಜದ ನಿರ್ಮಿಸಿದ ವಚನ ಚಳವಳಿ ಇದೀಗ ಮತ್ತೆ ಗ್ರಂಥಸ್ಥವಾಗಿಯೇ ಉಳಿಯುತ್ತಿರುವುದಕ್ಕೆ ಮಠಪೀಠಗಳ ಮುಖ್ಯಸ್ಥರೇ ಕಾರಣವೆಂದು ಹರಿಹಾಯ್ದರು.
ಮಡಿವಾಳ ಮಾಚಯ್ಯನವರನ್ನು ಜಂಗಮಕರಣಗೊಳಿಸುವ ಮೂಲಕ ಆತನ ಉನ್ನತವಾಗಿರುವ ವ್ಯಕ್ತಿತ್ವವನ್ನು ಹಾಳು ಮಾಡಬೇಕೆಂಬ ಸನಾತನಿಗಳ ಕುಯುಕ್ತಿಯನ್ನು ಪ್ರಜ್ಞಾವಂತರೆಲ್ಲ ತಡೆಯಬೇಕೆಂದು ಅವರು ಕರೆ ನೀಡಿದರು.
ಇಹಲೋಕದ ಬದುಕು ಮೂಲೆಗುಂಪು: ಬಸವ ಮಾರ್ಗ ಪ್ರತಿಷ್ಠಾನದ ಶಿವಣ , ಇಜೇರಿ ಮಾತನಾಡಿ, ನಿತ್ಯವೂ ನಮ್ಮ ಬದುಕಿನಲ್ಲಿ ಹಲವಾರು ಮೌಢ್ಯದ ಆಚರಣೆಗಳನ್ನು ಅನುಸರಿಸುತ್ತಿದ್ದೇವೆ. ಯಾರೂ ಕಂಡು ಬಂದು ವಿವರಿಸದ ಸ್ವರ್ಗಲೋಕಕ್ಕೆ ಆಸೆ ಮಾಡಿ ಇಹದ ಬದುಕನ್ನು ಮೂಲೆಗುಂಪು ಮಾಡಿದ್ದೇವೆ. ಶರಣರ ಬದುಕು ಅವರು ಬರೆದಿರುವ ವಚನ ಸಾಹಿತ್ಯ ನಮ್ಮ ಬದುಕಿಗೆ ದಾರಿದೀಪವಾಗಿಸಿಕೊಳ್ಳಬೇಕು. ಇಲ್ಲದೆ ಹೋದರೆ ಲಿಂಗಾಯತರೆಂದು ಕರೆಯಿಸಿಕೊಳ್ಳುವ ಪ್ರಜ್ಞಾವಂತರ ಗುಂಪು ನಮ್ಮ ಕಣ , ೆದುರೇ ಕರಗಿ ಹೋಗುತ್ತದೆ. ವಚನ ಸಾಹಿತ್ಯವನ್ನು ಓದುವ ಮೂಲಕ ನಮ್ಮ ಅರಿವಿಗೆ ನಾವೇ ತೆರೆದುಕೊಳ್ಳಬೇಕೆಂದು ಹೇಳಿದರು.
ಬೀದರ್ ಜಿಲ್ಲಾ ಸಿವಿಲ್ ನ್ಯಾಯಾಧೀಶರಾದ ಎಂ.ಸಿ.ಬಿರಾದಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಂಕ್ರಪ್ಪ ಕುಂಬಾರ ಶಹಾಬಾದ್ ಮಾತನಾಡಿದರು. ಅಂಬಿಕಾ ಮ್ಯಾಗಿನಮನಿ ಸ್ವಾಗತಿಸಿದರು. ಸಿದ್ದು ಮ್ಯಾಗಿನಮನಿ ನಿರೂಪಿಸಿದರು. ಚಂದ್ರು ಯಾಳಗಿ ವಂದಿಸಿದರು. ಶಿವಣ , ಮಾಸ್ಟರ್ ಚೆನ್ನೂರ, ಸೊಲಬಣ , ಆನೇಗುಂದಿ, ರೇಖಾ ಹಾದಿಮನಿ, ತಾಯಮ್ಮ, ಗಂಗಾಧರ ಶಹಾಬಾದ, ಅಮರೇಶಗೌಡ ಹೋತಪೇಟ, ಸಿದ್ರಾಮಪ್ಪ ಕೆರವಟಗಿ, ಸಾಯಿಕುಮಾರ ಇಜೇರಿ ಇದ್ದರು.