ಸಾರ್ವಜನಿಕರ ಸ್ವರಚಿತ ಕವನಗಳಿಗೆ ಆಹ್ವಾನ
ಗುಲ್ಬರ್ಗ: ನೃಪತುಂಗ ನಗರ ಸಾರಿಗೆ ವಾಹನಗಳ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಈ ಭಾಗದ ಉದಯೋನ್ಮುಖ ಬರಹಗಾರರಿಗೆ ಮತ್ತು ಸಾಹಿತಿಗಳಿಗೆ ಇನ್ನಷ್ಟು ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಯುವ ಬರಹಗಾರರಿಗೆ ವೇದಿಕೆ ಕಲ್ಪಸುವುದು ನಮ್ಮ ಉದ್ದೇಶ. 'ಹೊಸ ಬೇರು ಹಳೆ ಚಿಗುರು ಕೂಡಿರಲು ಮರ ಸೊಬಗು' ಎನ್ನುವಂತೆ ಹಿರಿಯ ಸಾಹಿತಿಗಳೂ ತಮ್ಮ ವಿಚಾರಗಳಿಂದ ಕಾವ್ಯ ಕಟ್ಟುವ ಮೂಲಕ ಕಿರಿಯರಿಗೆ ಆಸರೆಯಾಗುವುರೆಂಬ ಉದ್ದೇಶದಿಂದ ಹಿರಿಯ ಸಾಹಿತಿಗಳಿಂದಲೂ ಕವಿತೆಗಳನ್ನು ಕನ್ನಡ ಕ್ರಿಯಾ ಸಮಿತಿಯು ಬಯಸಿದೆ. ಆಸಕ್ತರು ತಮ್ಮ ಸ್ವರಚಿತ ಕವನಗಳನ್ನು ಮೇ 15ರೊಳಗೆ ಭಾವಚಿತ್ರ, ವಿಳಾಸ ಮತ್ತು ಒಂದಿಷ್ಟು ಮಾಹಿತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ವಿವರಕ್ಕೆ 99163 71969, 98448 99565, 77609 92064ಗೆ ಸಂಪರ್ಕಿಸಬಹುದು.