'ಕೈ' ಗೆಲವು: ವಿಜಯೋತ್ಸವ
ಸುರಪುರ: ತೀವ್ರ ಜಿದ್ದಾಜಿದ್ದಿ ಕ್ಷೇತ್ರವೆಂದೇ ಬಿಂಬಿತವಾದ ಸುರಪುರ ಎಸ್ಟಿ ಮೀಸಲು ವಿಧಾನಸಭೆಗೆ ಬುಧವಾರ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಅವರ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ, ಕುಣಿದು ಕುಪ್ಪಳಿಸಿದರು.
ಪಟಾಕಿ ಸಿಡಿಸಿ, ಪರಸ್ಪರ ಗುಲಾಲ್ ಎರಚಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ರಾಜಾ ವೆಂಕಟಪ್ಪನಾಯಕರಿಗೆ ಜಯವಾಗಲಿ, ಕಾಂಗ್ರೆಸ್ಗೆ ಜಯವಾಗಲಿ ಎಂಬ ಘೋಷಣೆ ಕೂಗಿದರು. ಗಾಂಧೀ ವೃತ್ತದಿಂದ ಕಾಂಗ್ರೆಸ್ ಕಚೇರಿಯ ವಸಂತ ಮಹಲ್ವರೆಗೆ ರಾಜಾ ವೆಂಕಟಪ್ಪನಾಯಕರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.
ಮುಖಂಡರಾದ ರಾಜಶೇಖರಗೌಡ ವಜ್ಜಲ್, ಬಸನಗೌಡ ಯಡಿಯಾಪುರ, ಶಿವಣ್ಣ ಮಂಗೀಹಾಳ, ಸೂಲಪ್ಪ ಕಮತಗಿ, ವಿಠ್ಠಲ ಯಾದವ, ವೆಂಕೋಬ ಮಂಗಳೂರು, ತಿಪ್ಪರಾಜಗೌಡ ಬಾಚಿಮಟ್ಟಿ, ಮಾನಪ್ಪ ಸೂಗೂರು, ದತ್ತಾತ್ರೇಯ ಗುತ್ತೇದಾರ್, ಅಮೀನರೆಡ್ಡಿ ಪಾಟೀಲ್, ಅಬ್ದುಲ್ ಗಫಾರ್ ನಗನೂರಿ, ಸುರೇಶ ತಂಬಾಕೆ, ರಾಜಾ ಪಿಡ್ಡನಾಯಕ, ಸುರೇಶ ಶೆಟ್ಟಿ, ಶ್ರೀನಿವಾಸ ರಫಗಾರ್, ವೆಂಕಟೇಶ ಪೋತಲಕರ್, ದೊಡ್ಡ ದೇಸಾಯಿ, ಮಾನಪ್ಪ ಸಾಹು, ರವಿಚಂದ್ರ ಸಾಹು, ಅಹ್ಮದ ಪಠಾಣ ಇದ್ದರು.