'ಕೈ' ಹಿಡಿದಿದ್ದಕ್ಕೆ ಖರ್ಗೆ ದಿಲ್ಖುಷ್
ಕ.ಪ್ರ.ವಾರ್ತೆ ಗುಲ್ಬರ್ಗ ಮೇ 8
ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಮತದಾರ ಆಶೀರ್ವದಿಸಿದ್ದಾನೆ. ಈ ಬೆಳವಣಿಗೆ ತಮಗೆ ಖುಷಿ ತಂದಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷದ ಜನಪರ ನೀತಿಗಳು, ಈ ಚುನಾವಣೆಯಲ್ಲಿ ಪಕ್ಷ ಪ್ರಕಟಿಸಿರುವ ಪ್ರಣಾಳಿಕೆ ಎಲ್ಲವೂ ಪಕ್ಷದ ಈ ಸಾಧನೆಗೆ ಪೂರಕವಾಗಿದೆ. ಜೊತೆಗೇ ಕಲಂ 371 ವಿಧೇಯಕಕ್ಕೆ ಯುಪಿಎ ಸರ್ಕಾರ ಒತ್ತು ನೀಡಿ ಅಂಗೀಕರಿಸಿದ್ದು ಸಹ ಈ ಚುನಾವಣೆಯಲ್ಲಿ ಹೆಚ್ಚಿನ ಪರಿಣಾಮ ಬೀರಿದೆ ಎಂದು ಹೇಳಿದರು.