ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಿಜವಾಯ್ತು ಜನರ ನಿರೀಕ್ಷೆ

Lingaraj Badiger
Updated On : 9 May 2013, 11:06 am

ಕ.ಪ್ರ. ವಾರ್ತೆ, ಚಿಂಚೋಳಿ, ಮೇ 8
ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಉಮೇಶ ಜಾಧವ ಅವರು ವಿಜಯಶಾಲಿಯಾಗಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯ ಸಸ್ಯಶಾಸ್ತ್ರ ಅಧ್ಯಯನ ಕೇಂದ್ರದಲ್ಲಿ ಬುಧವಾರ ನಡೆದ ಮತ ಎಣಿಕೆಯಲ್ಲಿ ಪ್ರಥಮವಾಗಿ ವಿಧಾನಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಡಾ. ಉಮೇಶ ಜಾಧವ ಅವರು ಮಾಜಿ ಸಚಿವ ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರನ್ನು ಸೋಲಿಸಿ ಪ್ರಥಮವಾಗಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ.
ಮತ ಅಂತರ: ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂಬುದು ಜನರ ನಿರೀಕ್ಷೆಯಾಗಿತ್ತು. ಕೆಜೆಪಿ ಸೋಲಿಸುವ ಮೂಲಕ ಮತ್ತೆ ಕಾಂಗ್ರೆಸ್ ತನ್ನ ಸ್ಥಾನ ಭದ್ರವಾಗಿಟ್ಟುಕೊಂಡಿದೆ.
1998ರಲ್ಲಿ ಕಾಂಗ್ರೆಸ್ ಪಕ್ಷದ ಕೈಲಾಸನಾಥ ಪಾಟೀಲರ ಗೆಲವು ನಂತರ ಜೆಡಿಎಸ್ ಮತ್ತು ಬಿಜೆಪಿ ಚಿಂಚೋಳಿ ವಿಧಾನಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದವು. ಈಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಗೆಲುವು ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಉಮೇಶ ಜಾದವ ಅವರು 58,599 ಮತಗಳು ಮತ್ತು ಕೆಜೆಪಿ ಅಭ್ಯರ್ಥಿ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಅವರು 32,539 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಉಮೇಶ ಜಾಧವ ಅವರು 26,060 ಮತಗಳಿಂದ ಗೆಲವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ ಯಾಕಾಪುರ-12,329 ಮತ್ತು ಜೆಡಿಎಸ್‌ನ ಮಲ್ಲಿಕಾರ್ಜುನ ಗಾಜರೆ-1218 ಮತಗಳು ಮತ್ತು ಬಿಎಸ್‌ಆರ್ ಅಭ್ಯರ್ಥಿ ವಿಠ್ಠಲ್ ಕರೆ ಅಂಬಲಗಾ- 308,  ಸಮಾಜವಾದಿ ಪಕ್ಷದ ಗೋಪಾಲ್ ರಾಠೋಡ- 448, ಬಿಎಸ್ಪಿಯ ಗೌತಮ್ ಬೊಮ್ಮನಳ್ಳಿ-1374, ಜೆಡಿಯು ಅಭ್ಯರ್ಥಿ ಸುನೀಲ್ ಮೋತಿಲಾಲ್- 3081, ಪಕ್ಷೇತರ ಅಭ್ಯರ್ಥಿಗಳಾದ  ಸಂದೀಪ ಚವ್ಹಾಣ- 1288, ವೆಂಕಟೇಶ್ವರ ಕುಪಾವತ್ 678, ಡಾ. ಓಮರಾಜ್ ರಾಠೋಡ- 588, ಬಸವರಾಜ ವಾಡಿ- 529 ಮತಗಳು ಪಡೆದುಕೊಂಡಿದ್ದಾರೆ. ಇನ್ನು ಅಂಚೆ ಮತಪತ್ರಗಳು ಒಟ್ಟು 410 ರಲ್ಲಿ 365 ತಿರಸ್ಕೃತಗೊಂಡಿವೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಜಮಾದಾರ, ಜಿಪಂ ಸದಸ್ಯ ದೀಪಕನಾಗ ಪುಣ್ಯಶೆಟ್ಟಿ, ಕೆ.ಎಂ.ಬಾರಿ, ರಾಮಶೆಟ್ಟಿ ಪವಾರ, ವಿಠ್ಠಲ್ ಚವ್ಹಾಣ, ಅಬ್ದುಲ್ ಬಾಸೀತ್, ಪ್ರಭುಲಿಂಗ ಲೇವಡಿ, ಮಧುಸೂಧನರೆಡ್ಡಿ ಕಲ್ಲೂರ, ಲಕ್ಷ್ಮಣ ಆವಂಟಿ,. ಜಗನ್ನಾಥ ಕಟ್ಟಿ, ಶಾಮರಾವ್ ಕೊರವಿ, ನರಸಿಂಹಲು ಸವಾರಿ ಇತರರು ಹರ್ಷ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement