ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬೇಡಿಕೆಗಳಿಗೆ ಒತ್ತಾಯಿಸಿ ನಾಳೆ ಪ್ರತಿಭಟನೆ

Lingaraj Badiger
Updated On : 9 May 2013, 11:06 am

ಗುಲ್ಬರ್ಗ: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮೇ 10ರಂದು ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘಟನೆ ದೇಶಾದ್ಯಂತ ಒಂದು ದಿನದ ಸಾಂಕೇತಿಕ ಔಷಧ ವ್ಯಾಪಾರ ಬಂದ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದ್ದು, ಈ ಹೋರಾಟಕ್ಕೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಬೆಂಬಲಿಸಿದೆ. 20 ವರ್ಷಗಳ ಹಿಂದೆ ನಿಗದಿಪಡಿಸಿರುವ ಔಷಧ ವ್ಯಾಪಾರಸ್ಥರ ಲಾಭಾಂಶ ಕಡಿತಗೊಳಿಸುವ ಕುರಿತು ಕಾಯ್ದೆಗೆ 2013ರ ತಿದ್ದುಪಡಿಗೆ ಸೂಚಿಸಲಾಗಿರುವ ಲಾಭಾಂಶ ಕಡಿತಗೊಳಿಸಲಾರದೇ ಈಗಿದ್ದ ಪ್ರಕಾರವೇ ಮುಂದುವರಿಸಬೇಕು. ಔಷಧ ತಜ್ಞರ ಕೊರತೆ ನೀಗಿಸಲು ವ್ಯಾಪಾರ ನಡೆಸುತ್ತಿರುವ ಪಾಲುದಾರ, ಮಾಲೀಕರಿಗೆ ಔಷಧ ಹಾಗೂ ಕಾಂತಿವರ್ಧಕ ಕಾಯ್ದೆಯಲ್ಲಿ ಔಷಧ ಮಾರಾಟಕ್ಕೆ ಅರ್ಹತೆ ನೀಡಬೇಕೆಂದು ಒತ್ತಾಯಿಸಿದೆ.

ಆಸ್ತಿಗಾಗಿ ಕೊಲೆ ಯತ್ನ
ಗುಲ್ಬರ್ಗ: ಆಸ್ತಿಯಲ್ಲಿ ಪಾಲು ಕೊಡುವಂತೆ ಮಗ, ತಾಯಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸೇಡಂನ ಅಂಚೆ ಕಚೇರಿ ಸಮೀಪ ನಡೆದಿದೆ. ೇಡಂ ತಾಲೂಕಿನ ಹೊಳಿತಿಪ್ಪಿ ಗ್ರಾಮದ ಬಸವರಾಜ ತಂದೆ ನಾಗಣ್ಣ ಕುಡೊಕ್ಕಲಿಗೆರ್ ಮತ್ತು ಆತನ ತಾಯಿ ಶಂಕ್ರಮ್ಮ ಗಂಡ ನಾಗಣ್ಣ ಇಬ್ಬರು ಹಲ್ಲೆಗೊಳಗಾದವರು. ಬಸವರಾಜನ ಅಣ್ಣ ಮಲ್ಲಿಕಾರ್ಜುನಗೆ ಆರೋಗ್ಯ ಸರಿಯಿರಲಿಲ್ಲ. ಚಿಕಿತ್ಸೆಗಾಗಿ ಹಣ ಬೇಕಾಗಿತ್ತು. ಹೀಗಾಗಿ ಆಸ್ತಿಯಲ್ಲಿ ಪಾಲು ನೀಡುವಂತೆ ಮಲ್ಲಿಕಾರ್ಜುನ ಅವರ ಹೆಂಡತಿ ಅನಿತಾ ಮನೆಗೆ ಬಂದು ಅತ್ತೆ ಶಂಕ್ರಮ್ಮಳೊಂದಿಗೆ ಜಗಳ ತೆಗೆದು ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಬೆದರಿಕೆ ಹಾಕಿ ಹೋಗಿದ್ದಳು ಶಂಕ್ರಮ್ಮ ಮತ್ತು ಆಕೆಯ ಮಗ ಬಸವರಾಜ ಇಬ್ಬರು ಸೇಡಂ ಠಾಣೆಗೆ ಹೋಗಿ ದೂರು ನೀಡಿರುವ ಕುರಿತು ವಿಚಾರಿಸಲು ತೆರಳುತ್ತಿದ್ದಾಗ ಅನಿತಾಳ ಅಣ್ಣಂದಿರ ಮೇಲೆ ಹಲ್ಲೆ ನಡೆಸಿದ್ದಾರೆ. ಬಸವರಾಜನ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement