ಅಪರಿಚಿತ ಶವ ಪತ್ತೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಬಾಲ ವಿದ್ಯಾಮಂದಿರ ಶಾಲೆಯ ಮೈದಾನದಲ್ಲಿ ಮಂಗಳವಾರ ಅಪರಿಚಿತ ಶವ ಪತ್ತೆಯಾಗಿದೆ.
ಉದ್ದು ಮುಖ ಕಪ್ಪು ಮೈಬಣ್ಣ ಹೊಂದಿದ್ದು, ಕಪ್ಪು ಕೂದಲು, ಕಪ್ಪು, ಬಿಳಿ ಮಿಶ್ರಿತ ಮೀಸೆ ಹೊಂದಿದ್ದು, ಬಿಳಿ ಬಣ್ಣದ ನೆಹರು ಶರ್ಟ್, ಬಿಳಿ ಧೋತರ ತೊಟ್ಟಿದ್ದು, ಬಲಭಾಗದ ಕಿವಿಯ ಮೇಲ್ಗಡೆ ರಿಂಗ್ ಹಾಕಿದ್ದು, ಕೈಗೆ ಕೆಂಪು ದಾರ ಕಟ್ಟಿದ್ದು, ಹೆಚ್ಚಿನ ವಿವರಕ್ಕೆ ಶಹಾಬಾದ್ ನಗರ ಠಾಣೆ ದೂ. 08474-204444, ಮೊ. 9480803623ಗೆ ಸಂಪರ್ಕಿಸಲು ಕೋರಲಾಗಿದೆ.
ಟಂಟಂ ಜಖಂ
ಗುಲ್ಬರ್ಗ/ಶಹಾಬಾದ್: ನಾಲವಾರ ಗ್ರಾಮದ ವಾರ್ಡ್ 2ರ ನೀಲಗಾರರವರ ಮನೆಯ ಹತ್ತಿರ ಬೇವಿನ ಮರ ಮಳೆ ಗಾಳಿಗೆ ಬುಧವಾರ ಉರುಳಿ ಬಿದ್ದಿದ್ದು, ಮರದ ಅಡಿಯಲ್ಲಿ ನಿಲ್ಲಿಸಿದ್ದ ಎರಡು ಟಂಟಂ ಜಖಂಗೊಂಡಿದ್ದು, ಮರ ಬಿದ್ದ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.
ಬುಧವಾರ ಸಂಜೆ ಬೀಸಿದ ಭಾರಿ ಗಾಳಿ, ಮಳೆಯಿಂದ ಮರ ಉರುಳಿದೆ. ಮರ ಉರುಳಿದ ಸ್ಥಳ ಸಾರ್ವಜನಿಕ ರಸ್ತೆಯಾಗಿದ್ದರು, ಮಳೆಯಿಂದಾಗಿ ಯಾರೊಬ್ಬರು ರಸ್ತೆಯಲ್ಲಿ ಇಲ್ಲದೆ ಇರುವುದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.