ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚಿತ್ತಾಪುರದಲ್ಲಿ ಅದ್ಧೂರಿ ವಿಜಯೋತ್ಸವ

Vishwanath S
Updated On : 10 May 2013, 12:26 pm

ಚಿತ್ತಾಪುರ: ಕ್ಷೇತ್ರದ ನೂತನ ಶಾಸಕ ಪ್ರಿಯಾಂಕ್ ಖರ್ಗೆ ಅವರ ಗೆಲವಿನ ವಿಜಯೋತ್ಸವ ಮೆರವಣಿಗೆಯು ಅದ್ಧೂರಿಯಾಗಿ ಜರುಗಿತು.
ನೂತನ ಶಾಸಕ ಪ್ರಿಯಾಂಕ್ ಖರ್ಗೆ ಗುರುವಾರ ಇಲ್ಲಿಯ ಪ್ರಸಿದ್ದ ನಾಗಾವೇಲಾಂಬಿಕ ದೇವಸ್ಥಾನ ಹಾಗೂ ಚಿತಾಶಹವಲಿ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆದು, ಕಂಬಳೇಶ್ವರ ಮಠಕ್ಕೆ ಭೇಟಿ ನೀಡಿ ಮಠದ ಸೋಮಶೇಖರ ಶಿವಾಚಾರ್ಯರ ಆಶೀರ್ವಾದ ಪಡೆದ ನೂತನ ಶಾಸಕರಿಗೆ ಅಲ್ಲಿಂದ ಪಕ್ಷದ ಕಾರ್ಯಕರ್ತರು ಬೈಕ್ ರ್ಯಾಲಿಯ ಮೂಲಕ ಪಕ್ಷದ ಕಚೇರಿ ಕರೆತಂದರು.
ಅನಂತರ ಪಕ್ಷದ ಕಚೇರಿಯಿಂದ ವಿಜಯೋತ್ಸವದ ಅದ್ಧೂರಿ ಮೆರವಣೆಗೆಯು ಅರಂಭಗೊಂಡು ಪಟ್ಟಣದ ಸ್ಟೇಶನ್ ರಸ್ತೆ, ಜಾಫರ್ ಗಂಜ ಮೂಲಕ ತೆರಳಿದ ಮರವಣಿಗೆ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಹಾಗೂ  ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭುವನೇಶ್ವರಿ ಚೌಕ್ ಮೂಲಕ ತೆಳಗೆರಿ, ಚಿತ್ತಾವಲಿ ಚೌಕ್, ಜನತಾ ಬಜಾರ, ನಾಗಾವಿ ಚೌಕ್ ಮೂಲಕ ಪಕ್ಷದ ಕಚೇರಿಗೆ ತಲುಪಿತು.
ಮೆರವಣಿಗೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಡಾ. ಪ್ರಭುರಾಜ ಕಾಂತಾ, ನಾಗರೆಡ್ಡಿ ಪಾಟೀಲ್ ಕರದಾಳ, ಸೋಮಶೇಖರ ಪಾಟೀಲ್ ಬೆಳಗುಂಪಾ, ಚಂದ್ರಶೇಖರ ಕಾಶಿ, ರವೀಂದ್ರ ಸಜ್ಜನಶೆಟ್ಟಿ, ಬಸವರಾಜ ಚಿಣಮಳ್ಳಿ, ನಾಗಯ್ಯ ಗುತ್ತೇದಾರ, ಮುಕ್ತಾರ ಪಟೇಲ್, ಶರಣಪ್ಪ ಹೊಸೂರು, ಪಾಶಾಮಿಯ್ಯ ಖುರೇಶಿ, ಉದಯಕುಮಾರ ಸಾಗರ, ಶೀಲಾ ಕಾಶಿ, ರಂಗನಾಥ ಜಡಿ, ಮಲ್ಲಿಕಾರ್ಜುನ ಮುಡಬೂಳಕರ್, ಪುರಸಭೆ ಸದಸ್ಯರಾದ ಸಿದ್ರಾಮೇಶ ಸಜ್ಜನಶೆಟ್ಟಿ, ವಿನೋದ ಗುತ್ತೇದಾರ, ಸುರೇಶ ಅಳ್ಳೋಳ್ಳಿ, ಮಲ್ಲಿಕಾರ್ಜುನ ಪೂಜಾರಿ, ನಾಗರಾಜ ಬಂಕಲಗಿ, ಜಫರಲ್ ಹಸನ್, ಅಬ್ದುಲ್ ಕಲಿಂ, ನಾಗಪ್ಪ ಕಲ್ಲಕ, ಶಿವಕಾಂತ ಬೆಣ್ಣೂರ ವಿನೂಕುಮಾರ ಜೆ.ಡಿ. ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕರ್ತರು ಸಿಹಿ ಹಂಚಿ, ಪಠಾಕಿ ಸಿಡಿಸಿ, ಗುಲಾಲ್ ಎರಚಿ ಕುಣಿದು ಕಪ್ಪಳಿಸಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement