ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಡಿಯೂರಪ್ಪ ಶಕ್ತಿ ಸಾಬೀತು, ಶೀಘ್ರವೇ ಸಭೆ

Vishwanath S
Updated On : 10 May 2013, 12:26 pm

ಕನ್ನಡಪ್ರಭ ವಾರ್ತೆ, ಆಳಂದ, ಮೇ 9
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್ಸಿಗೆ ಸ್ಪಷ್ಟ ಜನಾದೇಶ ದೊರೆತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಲ್ಲದೆ ಬಿಜೆಪಿಗೆ ದೊಡ್ಡ ಮಟ್ಟದ ಹೊಡೆತಬಿದ್ದಿದೆ ಎಂದು ನೂತನ ಕೆಜೆಪಿ ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಕಾರ್ಯಕರ್ತರು ಆಯೋಜಿಸಿದ ವಿಜಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ರಾಜ್ಯದ ಹಲವು ಕ್ಷೇತ್ರಗಳಲ್ಲಿ ಓಡಾಡಿರುವುದೇ ಬಿಜೆಪಿಗೆ ಪಾಠವಾಗಿದ್ದು, ಕಾಂಗ್ರೆಸ್ ಸರ್ಕಾರ ರಚನೆ ಮಾಡುತ್ತದೆ. ಅಭಿವೃದ್ಧಿ ಕಡೆಗಮನ ಕೊಡುವಂತವರು.
ಜನಪರ ಕಾಳಜಿಯುಳ್ಳವರು ಮುಖ್ಯಮಂತ್ರಿಗಳಾಗಬೇಕೆಂದು ಅವರು ಆಪೇಕ್ಷಿಸಿದರು.
ಬೆರಳೆಣಿಕೆಯಷ್ಟೇ ಸಂಖ್ಯಾಬಲ ಹೊಂದಿರುವ ಕೆಜೆಪಿ ಮುಂದಿನ ನಡೆಯೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಷಯಾಧಾರಿತ ರಾಜಕಾರಣ ಹಾಗೂ ಸರ್ಕಾರದ ಉತ್ತಮ ಕೆಲಸಕ್ಕೆ ಬೆಂಬಲ ನೀಡುತ್ತೇವೆ. ಒಂದು ವೇಳೆ ಸರ್ಕಾರ ತಪ್ಪುದಾರಿಗೆ ನಡೆದರೆ ವಿರೋಧಿಸುತ್ತೇವೆ ಎಂದರು.
ಪಕ್ಷದ ಮುಂದಿನ ನಡೆ ಕುರಿತು ಶೀಘ್ರವೇ ಬೆಂಗಳೂರಿನಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮುಖಂಡರ ಸಭೆ ಕರೆಯಲಾಗುವುದು ಎಂದರು.
ಮತದಾರರಿಗೆ ಕೃತಜ್ಞತೆ: ಕ್ಷೇತ್ರದಲ್ಲಿ ಅನೇಕ ಸವಾಲು, ಬೆಟ್ಟದಷ್ಟು ಸಮಸ್ಯೆಗಳಿವೆ ಇವುಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲರ ಸಹಕಾರ ಸಲಹೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲಾಗುವುದು. ವಿವಿಧ ಸಮುದಾಯಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿ, ಅವರ ವಿಶ್ವಾಸವನ್ನು ಪಡೆದು ಸೌಹಾರ್ದಯುತ ವಾತಾವರಣ ಸೃಷ್ಟಿಗೆ ಪ್ರಯತ್ನಿಸುವುದಾಗಿ ಪಾಟೀಲ್ ನುಡಿದರು.
ವಿಶೇಷವಾಗಿ ಈ ಚುನಾವಣೆಯಲ್ಲಿ ಉತ್ಸಾಹಿ ಯುವ ವೃಂದ ಬಹುನಿರೀಕ್ಷೆಯಿಟ್ಟು ಅಭಿವೃದ್ಧಿ ಆಗಬೇಕೆನ್ನುವ ಆಸೆಯಿಟ್ಟು ಕೊಂಡಿದ್ದಾರೆ. ಅವರ ನಿರೀಕ್ಷೆ ಮುಟ್ಟಲು ಪ್ರಯತ್ನಮಾಡುವುದಾಗಿ ಹೇಳಿದರು.
ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆ ಲಿಕರ್, ಸಾರಾಯಿ ಚಿಲ್ಲರೆ ಮಾರಾಟ ನಿಲ್ಲಿಸುವ ಭರವಸೆ ಖಂಡಿತವಾಗಿ ತಡೆಯಲು ಅಬ್ಕಾರಿ ಮತ್ತು ತಹಸೀಲ್ದಾರರಿಗೆ ತಾಕೀತು ಮಾಡುತ್ತೇನೆ. ಕ್ಷೇತ್ರದಲ್ಲಿನ ನೀರಿನ ಸಮಸ್ಯೆ ನಿವಾರಣೆಗೆ ಮೊದಲಾದ್ಯತೆ ನೀಡುವುದಾಗಿ ಹೇಳಿದರು.
ನನ್ನ ಗೆಲವಿಗೆ ಅಭೂತಪೂರ್ವ ಬೆಂಬಲ ಮತದಾರರು ಕೊಟ್ಟಿದ್ದಾರೆ. ಕಾರ್ಯಕರ್ತರು ಪರಿಶ್ರಮದಿಂದ ದುಡಿದಿದ್ದಾರೆ ಎಂದು ಇಬ್ಬರಿಗೆ ಅಭಿನಂದಿಸಿ ಮಾತು ಆರಂಭಿಸಿದ ಅವರು, ದೊರೆತ ಜಯ ಮತ್ತು ಕೀರ್ತಿ ಸಂಪೂರ್ಣವಾಗಿ ಕಾರ್ಯಕರ್ತರಿಗೆ ಸಲ್ಲುತ್ತದೆ.
ಈ ಬಾರಿ ಮತದಾರರು ಹಣ ಮತ್ತು ಹೆಂಡದ ಅಮಿಷಕ್ಕೆ ಒಳಗಾಗದೆ ಒಂದು ಬದಲಾವಣೆ ಬಯಸಿ ಗಟ್ಟಿ ನಿರ್ಧಾರ ತೆಗೆದುಕೊಂಡಿರುವುದು ವಿಶೇಷ ಐತಿಹಾಸಿಕವಾಗಿದೆ ಎಂದು ಸ್ಮರಿಸಿದರು. ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್, ಕೆಜೆಪಿ ತಾಲೂಕು ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement