ಕಾಯಂ ಪಡಿಚರ ಚೀಟಿ; ವಿವರ ನೀಡಲು ಮನವಿ
ಗುಲ್ಬರ್ಗ: ನಗರ ಮತ್ತು ಶಹಾಬಾದ್- ವಾಡಿ ನಗರ ಪ್ರದೇಶದ 2010ನೇ ಸಾಲಿಗಿಂತ ಹಿಂದೆ ನೀಡಿದ ಕಾಯಂ ಪಡಿತರ ಚೀಟಿ ಹೊಂದಿದವರಿಗೆ ಬೆರಳಚ್ಚು ಬಯೋವುಟ್ರಿಕ್ ಮತ್ತು ಫೋಟೋ ನೀಡಬೇಕಾಗಿದೆ.
ಈ ಹಿಂದೆ ಖಾಸಗಿ ಸಂಸ್ಥೆ ನೀಡಿದ ಕಾಯಂ ರೇಷನ್ ಕಾರ್ಡ್ ಹೊಂದಿದವರು ಸಂಖ್ಯೆ 9212357123ಗೆ ತಮ್ಮ ಅಥವಾ ಕುಟುಂಬ ಸದಸ್ಯರ ಅಥವಾ ಸ್ನೇಹಿತರ ಮೊಬೈಲ್ನಿಂದ ಖಈಖಊಃ ಪದ ಮತ್ತು ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ (ಉದಾ-ಖಈಖಊಃ ಈಓಂ 06122462) ಖಂಖ ಕಳುಹಿಸಿ ಟೋಕನ್ ನಂಬರ್ ಮತ್ತು ಸೆಕ್ಯೂರಿಟಿ ಕೋಡ್ ಸಂಖ್ಯೆ ಪಡೆದು ತೋರಿಸಿದಲ್ಲಿ ಮಾತ್ರ ಮೇ ತಿಂಗಳಿನ ರೇಷನ್ ಮತ್ತು ಸೀಮೆ ಎಣ್ಣೆ ಪಡೆಯಬಹುದು. ನಿಮ್ಮ ಮೊಬೈಲ್ಗೆ ಬರುವ ಟೋಕನ್ ನಂಬರ್ ಮತ್ತು ಸೆಕ್ಯೂರಿಟಿ ಕೋಡ್ನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುವುದು. ಈ ತಿಂಗಳೊಳಗೆ ಅಂತಹ ರೇಷನ್ ಕಾರ್ಡ್ ಪಡೆದವರು ತಮ್ಮ ಕುಟುಂಬದ ಸದಸ್ಯರ ಫೋಟೋ ಮತ್ತು ಬೆರಳಚ್ಚು ಬಯೋವುಟ್ರಿಕಗಳನ್ನು ಸನಿಹದ ಫೋಟೋ- ಬಯೋ ಸೇವಾ ಕೇಂದ್ರಕ್ಕೆ ಹೋಗಿ ನೀಡಬೇಕು. ತಪ್ಪಿದಲ್ಲಿ ಅಂತಹ ರೇಷನ್ ಕಾರ್ಡುಗಳನ್ನು ರದ್ದುಪಡಿಸಲಾಗುವುದು.
--