ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಜಕೀಯ ವೈಷಮ್ಯ: ಹಲ್ಲೆ ದೂರು ದಾಖಲು

Lingaraj Badiger
Updated On : 11 May 2013, 11:51 am

ಗುಲ್ಬರ್ಗ: ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಎರಡು ದಿನಗಳಲ್ಲಿ ರಾಜಕೀಯ ವೈಷಮ್ಯದಿಂದ ಹಲ್ಲೆ ನಡೆಸಿದ ಬಗ್ಗೆ ಪ್ರತ್ಯೇಕವಾಗಿ ಸೇಡಂ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಸೇಡಂ ತಾಲೂಕಿನ ತೆಲ್ಕೂರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಶರಣಪ್ರಕಾಶ ಪಾಟೀಲ್ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿತ್ತು. ಆಗ ಶಾಮಸುಂದರ ಎಂಬವರಿಗೆ ಗ್ರಾಮದ ಅಯ್ಯನಗೌಡ ಎಂಬವರು ತಕರಾರು ತೆಗೆದರು. ತನ್ನವರೊಂದಿಗೆ ಸೇರಿ ಶಾಮಸುಂದರ, ಸುಂದರ ಮತ್ತು ಗಂಗಮ್ಮ ಅವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ಈ ಕುರಿತು ಚಂದ್ರಪ್ಪ ಹಲಗೆ ಸೇಡಂ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರತ್ಯೇಕ ಘಟನೆ: ಬಿಜೆಪಿ ಪರ ಪ್ರಚಾರ ಮಾಡಿದ ಸೇಡಂ ತಾಲೂಕಿನ ತೆಲ್ಕೂರ ಗ್ರಾಮದ ಸಿದ್ದಪ್ಪ ಮತ್ತು ಜಗಪ್ಪ ಅವರ ಮೇಲೂ ಹಲ್ಲೆ ನಡೆಸಲಾಗಿದೆ. ಈ ಇಬ್ಬರು ಗುರುವಾರ ಸಂಜೆ 6ರ ಸುಮಾರಿಗೆ ಹೊಲದಿಂದ ಮನೆಗೆ ಬರುತ್ತಿದ್ದಾಗ ಗ್ರಾಮದ ಹರಿಜನ ಓಣಿಯಲ್ಲಿ ಚಂದ್ರಪ್ಪ, ಶಾಮರಾವ್ ಹಲಗಿ, ಸುಂದರ ಹಲಗಿ ಎಂಬವರು ಬಡಿಗೆಯಿಂದ ಹಲ್ಲೆ ನಡೆಸಿದ್ದಾರೆ. ಈ ಕುರಿತು ಸಿದ್ದಪ್ಪ ಸೇಡಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಜಿ.ರಾಮಕೃಷ್ಣ ಗೆಲವಿಗೆ ಹರ್ಷ
ಗುಲ್ಬರ್ಗ/ಶಹಾಬಾದ್: ಗುಲ್ಬರ್ಗ ಗ್ರಾಮೀಣ ಮತ ಕ್ಷೇತ್ರದಿಂದ ಜಿ.ರಾಮಕೃಷ್ಣರವರು ಗೆಲವು ಸಾಧಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಶಹಾಬಾದ್‌ನಲ್ಲಿ ವಿಜಯೋತ್ಸವ ಆಚರಿಸಿ, ಸಂಭ್ರಮಿಸಿದರು. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬ್ಲಾಕ್ ಅಧ್ಯಕ್ಷ ಡಾ. ಎಂ.ಎ.ರಶೀದ್ ನೇತೃತ್ವದಲ್ಲಿ ಕಾರ್ಯಕರ್ತರು ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿದರು. ವಿಜಯೋತ್ಸವದಲ್ಲಿ ಪಕ್ಷದ ವಿಜಯಕುಮಾರ ಮುಟ್ಟತ್ತಿ, ಸಂತೋಷಕುಮಾರ ಇಂಗಿನಶೆಟ್ಟಿ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement