ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ

Lingaraj Badiger
Updated On : 11 May 2013, 11:51 am

ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 10
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘಟನೆ ದೇಶಾದ್ಯಂತ ಒಂದು ದಿನದ ಸಾಂಕೇತಿಕ ಔಷಧ ವ್ಯಾಪಾರ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗುಲ್ಬರ್ಗದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಶುಕ್ರವಾರ ಎಲ್ಲ ಔಷಧಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿತು.
ದತ್ತಾತ್ರೇಯ ಪಾಟೀಲ್ ರೇವೂರ ನೇತೃತ್ವದಲ್ಲಿ ಮತ್ತು ಅರುಣಕುಮಾರ ಪಾಟೀಲ್ ನೇತೃತ್ವದಲ್ಲಿ ನಗರದಲ್ಲಿ ಪ್ರತ್ಯೇಕವಾಗಿ ಮೆರವಣಿಗೆ ನಡೆಸಲಾಯಿತು.
ಔಷಧ ಮತ್ತು ಮಾತ್ರೆಗಳು ತುರ್ತಾಗಿ ಬೇಕಾಗಿರುತ್ತವೆ. ಔಷಧ ಅಂಗಡಿಗಳು ಬಂದ್ ಮಾಡಿದರೆ ನಾಗರಿಕರಿಗೆ ತೊಂದರೆಯಾಗುತ್ತದೆ ಎಂಬ ವಿಷಯ ಅರಿತು ಸಹ ಅನಿವಾರ್ಯವಾಗಿ ನಮ್ಮ ಪ್ರಮುಖ ಬೇಡಿಕೆಗಳು ಈಡೇರಿಸಿಕೊಳ್ಳಲು ಈ ಬಂದ್‌ಗೆ ಕರೆ ನೀಡಲಾಗಿದೆ ಎಂದು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಮತ್ತು ಕಾರ್ಯದರ್ಶಿ ವಿದ್ಯಾಸಾಗರ ಕೆಎಸ್ ಅವರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಸ್ಪಷ್ಟಪಡಿಸಿದರು.
20 ವರ್ಷಗಳ ಹಿಂದೆ ನಿಗದಿಪಡಿಸಿರುವ ಔಷಧ ವ್ಯಾಪಾರಸ್ಥರ ಲಾಭಾಂಶ ಕಡಿತಗೊಳಿಸುವ ಕುರಿತು ಕಾಯ್ದೆಗೆ 2013ರ ತಿದ್ದುಪಡಿಗೆ ಸೂಚಿಸಲಾಗಿರುವ ಲಾಭಾಂಶ ಕಡಿತಗೊಳಿಸಲಾರದೇ ಈಗಿದ್ದ ಪ್ರಕಾರವೆ ಮುಂದುವರಿಸಬೇಕೆಂದು ಆಗ್ರಹಿಸಿದರು.
ಔಷಧ ವ್ಯಾಪಾರದಲ್ಲಿ ನಿರತರಾಗಬೇಕಿದ್ದ ಫಾರ್ಮಾಸಿಸ್ಟ್ ಔಷಧ ತಜ್ಞರ ಕೊರತೆ ನೀಗಿಸಲು ವ್ಯಾಪಾರ ನಡೆಸುತ್ತಿರುವ ಪಾಲುದಾರ, ಮಾಲೀಕರಿಗೆ ಔಷಧ ಹಾಗೂ ಕಾಂತಿವರ್ಧಕ ಕಾಯ್ದೆಯಲ್ಲಿ ಔಷಧ ಮಾರಾಟಕ್ಕೆ ಅರ್ಹತೆ ನೀಡಬೇಕೆಂದು ಒತ್ತಾಯಿಸಿದರು.
ಬೆಳಗ್ಗೆಯಿಂದಲೇ ನಗರದ ಎಲ್ಲ ಔಷಧ ಅಂಗಡಿಗಳು ಬಂದ್ ಆಗಿರುವುದರಿಂದ ತುರ್ತಾಗಿ ಬೇಕಾಗಿರುವ ಔಷಧ, ಮಾತ್ರೆಗಳಿಗಾಗಿ ನಾಗರಿಕರು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಔಷಧ ವ್ಯಾಪಾರಿಗಳಿಂದ ಮುಷ್ಕರ, ರೋಗಿಗಳ ಪರದಾಟ
ಚಿತ್ತಾಪುರ: ತಾಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಔಷಧ ವ್ಯಾಪಾರಿಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಔಷಧಿ ಅಂಗಡಿಗಳನ್ನು ಬಂದ್ ಮಾಡಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಪ್ರತವನ್ನು ಸಲ್ಲಿಸಿದರು.
ರಾಜ್ಯ ಮಟ್ಟದಲ್ಲಿ ಹಮ್ಮಿಕೊಂಡ ಒಂದು ದಿನದ ಮುಷ್ಕರಕ್ಕೆ ಬೆಂಬಲಿಸಿ ಚಿತ್ತಾಪುರ ಪಟ್ಟಣದ ಎಲ್ಲಾ ಔಷಧ ಅಂಗಡಿಗಳು ಬೆಳಗ್ಗೆಯಿಂದ ಸಂಜೆವರೆಗೆ ಬಂದ್ ಮಾಡಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ವಿವೇಕಾನಂದ ಹಂಚಾಟೆ, ಸೈಯದ್ ನಿಜಾಮೋದಿನ್ ಚಿಸ್ತಿ, ಶರಣಪ್ಪ ಹುಳಗೋಳ, ಭೀಮು ವಚ್ಚಾ, ಶಿವರಾಜ ಗುರಮಿಟಕಲ್, ಮಲ್ಲಿಕಾರ್ಜುನ ಹುಳಗೋಳಕರ್, ಅನಂದ ದೋಡ್ಮನಿ, ಗೋಪಾಲ ಸಿಂಗ್ ರಜಪುತ, ಚಂದ್ರಕಾಂತ ಜಿತುರೆ, ಕುಣಾನ್ ಜಿತುರೆ, ಸೈಯದ್ ನಜಮೋದ್ದಿನ್ ಚಿಸ್ತಿ, ಜಿವೇಶ್ವರ ಡಗೆ, ಶರಣಪ್ಪ ಮೋಗಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಔಷಧ ಅಂಗಡಿಗಳು ಬಂದ್ ಇದ್ದ ಪ್ರಯುಕ್ತ ಅಸ್ಪತ್ರೆಗೆ ಬಂದ ರೋಗಿಗಳು ಔಷಧಿಗಾಗಿ ಪರದಾಡಿದರು.

ತಹಸೀಲ್ದಾರ್ ಮೂಲಕ ಮನವಿ
ಜೇವರ್ಗಿ: ವಿವಿಧ ಬೇಡಿಕೆ ಈಡೇರಿಕೆಗೆ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
20 ವರ್ಷಗಳ ಹಿಂದೆ ನಿಗದಿ ಪಡಿಸಿದ ಲಾಭಾಂಶ ಕಡಿತಗೊಳಿಸುವ ಕಾಯ್ದೆಗೆ 2013ರಲ್ಲಿ ತಿದ್ದುಪಡಿಗೆ ಸೂಚಿಸಲಾಗಿರುವುದಕ್ಕೆ ಹಾಗೂ ಔಷಧ ವಹಿವಾಟನ್ನು ವಿದೇಶಿ ಹಣದ ಹೂಡಿಕೆಯಿಂದ ಮುಕ್ತಗೊಳಿಸಿ ಕುಟುಂಬಗಳಿಗೆ ಬದುಕುವ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಹಾಗೂ ಸ್ಥಳಿಯ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ನಾನಾಗೌಡ ಪಾಟೀಲ್ ಹಾಲಗಡ್ಲಾ, ರವಿ ರಾವೂರ, ಶ್ರೀಪಾದರಾವ ಕುಲಕರ್ಣಿ, ಶ್ರೀನಿವಾಸ ವಕೀಲ, ಕರುಣು ಪಾಟೀಲ್ ಹಳ್ಳಿ, ಸಂಗಣ್ಣಗೌಡ ಪಾಟೀಲ್ ಅವರಾದ, ವಿಶ್ವನಾಥಗೌಡ ಹಳ್ಳಿ, ಜಗನ್ನಾಥ ಹಿರೇಮಠ, ಗಣೇಶ ಮಹೇಂದ್ರಕರ್, ಶಿವು ಕಲ್ಲಾ, ಪ್ರಕಾಶ ಪುಲಾರೆ, ಮಹಾಲಿಂಗ ಹೂಗಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement