ಅಭಿವೃದ್ಧಿಗೆ ಮುಂದೂ ಸ್ಪಂದಿಸುತ್ತೇನೆ
ಜೇವರ್ಗಿ: ತಾವು ಕಳೆದ 2008ರ ಚುನಾವಣೆಯಲ್ಲಿ ಜನತೆಯ ಆಶಿರ್ವಾದದಿಂದ ಶಾಸಕನಾಗಿ ಆಯ್ಕೆಯಾದ ನಂತರ ತಮ್ಮ ತಂದೆಯವರ ಕ್ಷೇತ್ರದ ಅಭಿವೃದ್ಧಿ ಕನಸು ನನಸು ಮಾಡುವಲ್ಲಿ ಅವಿರತ ಪ್ರಯತ್ನ ಮಾಡಿದ್ದೇನೆ. ಅಲ್ಪಾವಧಿಯಲ್ಲಿ ಹಿಂದೆಂದೂ ಕಂಡರಿಯದಂಥಹ ಅಭಿವೃದ್ಧಿ ಮಾಡಿದ ತೃಪ್ತಿ ನನಗಿದೆ. ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ತಿಳಿಸಿದ್ದಾರೆ.
ಮತದಾರರು ನೀಡಿದ ತೀರ್ಪಿಗೆ ತಲೆಬಾಗುತ್ತೇನೆ. ನಾನು ಯಾವತ್ತು ಕ್ಷೇತ್ರದ ಜನರೊಂದಿಗೆ ಬೆರೆತವನು. ಸೋತರೂ ಸರಿ, ಮುಂದಿನ ದಿನಗಳಲ್ಲಿ ಜನಪರ ಸಮಸ್ಯೆಗಳು ಬಂದಾಗ ಹೋರಾಟದ ಮೂಲಕ ಜನತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾನು ಯಾವತ್ತೂ ಹಿಂದೆ ಬೀಳುವುದಿಲ್ಲ.
11ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಮಲ್ಲಾ (ಕೆ) ಕುಡಿಯುವ ನೀರಿನ ಯೋಜನೆ, ದಶಕಗಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ಆಹಾರ ಸಂಸ್ಕರಣಾ ಘಟಕದಂತೆ ರೈತರ ಮಹತ್ತರವಾದ ಮಲ್ಲಾಬಾದ್ ಏತ ನೀರಾವರಿ ಯೋಜನೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಿ ಎಂದು ನರಿಬೋಳ ಕನ್ನಡಪ್ರಭದೊಂದಿಗೆ ಮಾತನಾಡಿ ತಿಳಿಸಿದ್ದಾರೆ.