ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

8ನೇ ತರಗತಿ ಉನ್ನತೀಕರಣಕ್ಕೆ ತಡೆ

Lingaraj Badiger
Updated On : 15 May 2013, 12:16 pm

ಚಿತ್ತಾಪುರ: 2013-14ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿ ನಡೆಸುತ್ತಿದ್ದಲ್ಲಿ ಅದೇ ಶಾಲೆಯಲ್ಲಿ ಹೊಸದಾಗಿ 8ನೇ ತರಗತಿಯನ್ನು ಉನ್ನತಿಕರಿಸುವುದನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಚವ್ವಾಣ ಶೆಟ್ಟಿ ತಿಳಿಸಿದ್ದಾರೆ.
ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಈಗಾಗಲೇ ರಾಜ್ಯದಲ್ಲಿ 4 ಸಾವಿರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಯನ್ನು ಪ್ರಾರಂಭಿಸಲಾಗಿದ್ದು, ಅಂತಹ ಶಾಲೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿರುವುದಿಲ್ಲ. 1 ರಿಂದ 8ನೇ ತರಗತಿವರೆಗೆ ಮುಂದುವರೆಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಫ್ರೌಡಶಾಲೆಗಳಲ್ಲಿ 8, 9, 10ನೇ ತರಗತಿಗಳು ನಡೆಯುತ್ತಿದ್ದಲ್ಲಿ 8ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲಾ ವಿಭಾಗವೆಂದು ಪರಿಗಣಿಸಿ ದಾಖಲೆ ಮಾಡಿಕೊಳ್ಳಬೇಕು. ಪ್ರತ್ಯೇಕ ದಾಖಲಾತಿ, ಹಾಜರಾತಿ ವಹಿ, ಇನ್ನಿತರ ವಹಿಗಳನ್ನು ನಿರ್ವಹಿಸಬೇಕು. 8ನೇ ತರಗತಿ ವಿದ್ಯಾರ್ಥಿಗಳಿಗೆ ಫ್ರೌಡಶಾಲೆ ಶಿಕ್ಷಕರೆ ಪಾಠ ಬೋದಿಸಬೇಕು ಎಂದು ತಿಳಿಸಿದ್ದಾರೆ. ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 7ನೇ ತರಗತಿವರೆಗೆ ನಡೆಯುತ್ತಿದ್ದಲ್ಲಿ ಆ ಶಾಲೆಗಳ ಅಡಳಿತ ಮಂಡಳಿಯವರು 8ನೇ ತರಗತಿಯನ್ನು ಪ್ರಾರಂಭಿಸಲು ಇಚ್ಛಿಸಿದಲ್ಲಿ ಉಪ ನಿರ್ದೇಶಕರು ಶಾಲೆಗೆ ಭೇಟಿ ನೀಡಿ ಶಾಲೆಯ ಮೂಲ ಸೌಕರ್ಯ ಒದಗಿಸುವ ಖಾತ್ರಿ ಮಾಡಿಕೊಂಡು ಉನ್ನತಿಕರಿಸಲು ಪರವಾನಿಗೆ ನೀಡುವರು ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಶ್ರೀನಿವಾಸ ಉತ್ತಮ ಸಾಧನೆ
ಗುಲ್ಬರ್ಗ: ಇಲ್ಲಿನ ನೂತನ ವಿದ್ಯಾಲಯ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಶ್ರೀನಿವಾಸ ಸುಧೀಂದ್ರ ಅವಧಾನಿ ಪರೀಕ್ಷೆಯಲ್ಲಿ ಶೇ. 93.28 ಪ್ರತಿಶತ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ದ್ವಿತೀಯ ಭಾಷೆ ಕನ್ನಡದಲ್ಲಿ 99, ಸಮಾಜಶಾಸ್ತ್ರದಲ್ಲಿ 96, ಗಣಿತ, ವಿಜ್ಞಾನ, ಇಂಗ್ಲೀಷ್, ಹಿಂದಿ ಎಲ್ಲ ವಿಷಯಗಳಲ್ಲಿಯೂ ಶ್ರೀನಿವಾಸ 90ಕ್ಕೂ ಅಧಿಕ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement