ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕನ್ನಡ ಸೇನೆಯಿಂದ ಸಮಾಜದ ಅಭಿವೃದ್ಧಿ: ರಾಜು ಕುಂಬಾರ

Lingaraj Badiger
Updated On : 15 May 2013, 12:18 pm

ಸುರಪುರ: ಕನ್ನಡ ಸೇನೆಯು ಗ್ರಾಮಗಳ ಅಭಿವೃದ್ಧಿ ಮತ್ತು ಸಮಾಜದ ಒಳತಿಗಾಗಿ ಕಳೆದ 28 ವರ್ಷದಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಾಡಿನ ಅಭಿವೃದ್ಧಿ ವಿಷಯದಲ್ಲಿ ರಾಜಿ ಮಾಡಿಕೊಳ್ಳದ ರಾಜಕೀಯ ರಹಿತ ಸಂಘಟನೆಯಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ರಾಜು ಕುಂಬಾರ ಹೇಳಿದರು.
  ತಾಲೂಕಿನ ವಾಗಣಗೇರಾ ಗ್ರಾಮದಲ್ಲಿ ಅವರು ಸೇನೆಯ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿ, ಸೇನೆಯು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿಗೆ ಹೋರಾಡುತ್ತಿದೆ ಎಂದರು. ಕನ್ನಡ ನಾಡು, ನುಡಿ ರಕ್ಷಣೆಯೊಂದಿಗೆ ಸೇನೆಯು ನಾಗರಿಕರ ಮೂಲಸೌಕರ್ಯಗಳಿಗೆ ಪ್ರಾಮಾಣಿಕ ಹೋರಾಟ ಮಾಡಲಿದೆ. ಜಿಲ್ಲಾದ್ಯಂತ ಗ್ರಾಮ ಘಟಕಗಳನ್ನು ಸ್ಥಾಪಿಸಲಿದೆ ಎಂದು ತಿಳಿಸಿದರು.
  ತಾಲೂಕಾಧ್ಯಕ್ಷ ಮರೆಪ್ಪ ಹವಲ್ದಾರ್ ಮಾತನಾಡಿದರು. ಸೇನೆಯ ತಿಪ್ಪಯ್ಯ ಚಾವಲ್ಕರ, ಮಲ್ಲಿಕಾರ್ಜುನರೆಡ್ಡಿ, ಎ.ಬಾಲಾಜಿ ವೆಂಕಟೇಶ ಪೂಜಾರಿ, ದೇವಿಂದ್ರಪ್ಪನಾಯಕ, ಇಮಾಮ್ ಹುಸೇನ ಅರಕೇರಿ, ಮಲ್ಲಿಕಾರ್ಜುನ ಕಟ್ಟಿಮನಿ ಹಲವರಿದ್ದರು. ಇದೇ ವೇಳೆ ವಾಣಗೇರಾ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಹುಸೇನಸಾಬ್ ಅರಕೇರಿ- ಗೌರವಾಧ್ಯಕ್ಷ, ಮಲ್ಲಪ್ಪನಾಯಕ- ಅಧ್ಯಕ್ಷ, ಹಣಮಂತ ಗೌಡಗೇರಿ- ಉಪಾಧ್ಯಕ್ಷ, ರಾಮನಗೌಡ- ಪ್ರ.ಕಾರ್ಯದರ್ಶಿ, ಅಯ್ಯನಗೌಡ ಪಾಟೀಲ್-ಸಂಚಾಲಕ, ಸಂಜೀವನಾಯಕ- ಕಾರ್ಯಾಧ್ಯಕ್ಷ, ಶರಣಬಸವ ಟಣಕೇದಾರ್- ಸಂ.ಕಾರ್ಯದರ್ಶಿ, ಗೋಪಾಲ ಪೂಜಾರಿ- ಸಹ ಕಾರ್ಯದರ್ಶಿ, ಧನರಾಜ ಕುಳಗೇರಿ- ಖಜಾಂಚಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement