ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಚನಗಳು ಅಂಧಕಾರ ಕಳೆವ ಸೂತ್ರಗಳು

Lingaraj Badiger
Updated On : 15 May 2013, 12:16 pm

ಕನ್ನಡಪ್ರಭ ವಾರ್ತೆ, ಗುರುಮಠಕಲ್, ಮೇ 14
ವಿಶ್ವಗುರು ಬಸವಣ್ಣನವರ ತತ್ವ ಹಾಗೂ ವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಅವು ಮನುಷ್ಯನ ಜೀವನದಲ್ಲಿ ಅದ್ಭುತವಾದ ಶಕ್ತಿಯ ಜತೆಯಲ್ಲಿ ಜ್ಞಾನದ ಬುತ್ತಿಯನ್ನು ಬಿತ್ತಿ ಅಂಧಕಾರವನ್ನು ತೊಡೆದು ಹಾಕುವ ಸೂತ್ರಗಳಾಗಿವೆ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.
ಇಲ್ಲಿಗೆ ಸಮೀಪದ ಚಂಡರಕಿ ಗ್ರಾಮದಲ್ಲಿ ಬಸವ ಸಮಿತಿಯ ವತಿಯಿಂದ ಅಚರಿಸಿದ ಬಸವ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಸಮಾಜದಲ್ಲಿ ಜಿಡ್ಡುಗಟ್ಟಿಕೊಂಡಿದ್ದ ಜಾತಿ ಪದ್ಧತಿಗೆ ಕೊನೆಹೇಳಿ ಎಲ್ಲರೂ ಸಮಾನರು, ಎಲ್ಲ ಧರ್ಮಗಳ ಸಾರವೊಂದೇ. ಜಾತಿಗಳು ಅವರವರು ಮಾಡುವ ಕಾಯಕದ ಮೇಲೆ ಹುಟ್ಟಿವೆಯೇ ಹೊರತು ಹುಟ್ಟನ್ನು ಆಧರಿಸಿ ಅಲ್ಲ ಎಂಬುದು ಬಸವಣ್ಣನವರ ತತ್ವವಾಗಿತ್ತು ಎಂದು ತಿಳಿಸಿದರು.
12ನೇ ಶತಮಾನದಲ್ಲೇ ಸ್ತ್ರೀ ಸಮಾನತೆ..: ಮಹಿಳೆಯರಿಗೆ ಸಮಾನ ಸ್ಥಾನಮಾನ ನಿಡುತ್ತೇವೆ ಎಂದು ಇಂದಿನ ರಾಜಕಾರಣಿಗಳು ಹೇಳುತ್ತಲೇ ಇರುತ್ತಾರೆ. ಅದರೆ 12ನೇ ಶತಮಾನದಲ್ಲಿಯೇ ಬಸವಣ್ಣನವರು ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡುವುದರ ಮೂಲಕ ಸ್ತ್ರೀಸಮಾನತೆಯನ್ನು ಸಾರಿದರು ಎಂದರು.
 ವೀರಭದ್ರೇಶ್ವರ ಗುಡಿಯಿಂದ ಬಸವೇಶ್ವರರ ಭಾವ ಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು.
  ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮಿ ಭೀಮರಾವ ಚಂಡರಕಿ, ಯಾದಗಿರಿ ನಗರಸಭೆ ಸದಸ್ಯೆ ಅಕ್ಕಮಹಾದೇವಿ, ಗುರುಮಠಕಲ್ ಪಪಂ ಸದಸ್ಯರಾದ ವಿಜಯಲಕ್ಷ್ಮೀ, ರೇಣುಕಾ, ಉಪನ್ಯಾಸಕರಾದ ಅಖಂಡೇಶ್ವರ ಹಿರೇಮಠ, ಎಂ.ಶ್ರೀನಿವಾಸ ಚಂಡರಕಿ ಇತರರನ್ನು ಸನ್ಮಾನಿಸಲಾಯಿತು.
ಬಸವ ಸಮಿತಿಯ ಆರ್.ಬಸವರಾಜ ದಳಪತಿ, ಶರಣಯ್ಯ ಸ್ವಾಮಿ, ಮಲ್ಲಿಕಾರ್ಜುನ ಮಂತ, ಸುರೇಶಕುಮಾರ, ಪ್ರೇಮನಾಥ, ಶಿವಕುಮಾರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement