ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಕಲರಿಗೆ ಲೇಸು ಬಯಸುವುದೇ ಬಸವ ಪ್ರಜ್ಞೆ

Lingaraj Badiger
Updated On : 15 May 2013, 12:16 pm

 ಕನ್ನಡಪ್ರಭ ವಾರ್ತೆ, ಶಹಾಪುರ, ಮೇ 14
ಸಮಾನತೆಯ ಸಮಾಜ ಕಟ್ಟುವಲ್ಲಿ ಮಾನವೀಯ ಮೌಲ್ಯಗಳನ್ನು ಶ್ರೀಮಂತಗೊಳಿಸುವಲ್ಲಿ ಮಹಾತ್ಮ ಬಸವಣ್ಣನವರ ದಾರ್ಶನಿಕವಾದ ಬದುಕು ನಮ್ಮೆಲ್ಲರಿಗೂ ಪ್ರಸ್ತುತವಾಗಿದೆ ಎಂದು ವೇದಮೂರ್ತಿ ಅಜೇಂದ್ರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕ, ಯುವ ವೀರಶೈವ ಮಹಾಸಭಾ ತಾಲೂಕಾ ಘಟಕ ಮತ್ತು ಬಸವ ಜಯಂತಿ ಉತ್ಸವ ವತಿಯಿಂದ ಆಯೋಜಿಸಿದ್ದ ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಸವ ಪ್ರಜ್ಞೆ ಎಂದರೆ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಮಾನವೀಯ ಮೌಲ್ಯಗಳನ್ನು ಅರಳಿಸುವ ಸಂಸ್ಕೃತಿ, ಸಂಸ್ಕಾರದ ಏಳಿಗೆಗೆ ಶ್ರಮಿಸುವುದೇ ಆಗಿದೆ ಎಂದರು.
ವೇದಮೂರ್ತಿ ಬಸವಯ್ಯ ಶರಣರು ಇದ್ದರು. ಧಾರ್ಮಿಕ ಸಭೆಯ ಮುನ್ನ ಪಟ್ಟಣದ ಗುಗ್ಗಳ ಬಸವೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು.
ಕಳೆ ಕಟ್ಟಿದ ಮೆರವಣಿಗೆ: ರಥಾರೂಢ ಬಸವೇಶ್ವರರ ಮೆರವಣಿಗೆ, ಆಕರ್ಷಕ ಶಹನಾಯಿ ವಾದನ, ಸಾಂಪ್ರಾದಾಯಿಕ ಡೊಳ್ಳುಕುಣಿತ ಉತ್ಸವಕ್ಕೆ ಕಳೆಕಟ್ಟಿತ್ತು. ಮೆರವಣಿಗೆಯುದ್ದಕ್ಕೂ ಸರ್ವ ಸಮಾಜದವರು ಪಾಲ್ಗೊಂಡು ಜಗಜ್ಯೋತಿ ಬಸವಣ್ಣನವರಿಗೆ ಗೌರವ ಸಲ್ಲಿಸಿದರು.
ನೂತನ ಶಾಸಕ ಗುರುಪಾಟೀಲ ಶಿರವಾಳ, ವೀರಶೈವ ಸಮಾಜದ ಅಧ್ಯಕ್ಷ ಬಸವರಾಜೇಂದ್ರ ದೇಶಮುಖ, ಚಂದ್ರಶೇಖರ ಆರಬೋಳ, ಮಲ್ಲಣ್ಣ ಮಡ್ಡಿ, ಸುರೇಂದ್ರಪಾಟೀಲ ಮಡ್ನಾಳ, ಡಾ. ಚಂದ್ರಶೇಖರ ಸುಬೇದಾರ, ಡಾ. ಮಲ್ಲಣ್ಣಗೌಡ ಉಕ್ಕಿನಾಳ, ಸಿದ್ಲಿಂಗಣ್ಣ ಆನೇಗುಂದಿ, ಮುದ್ದಣ್ಣ ಪಾಲ್ಕಿ, ಶಿವಶರಣ ಕಾಮಾ, ರಾಜಶೇಖರ ನಗನೂರ, ಬಸವರಾಜ ಹೇರುಂಡಿ, ಗುರುಕಾಮಾ, ಸೂಗಣ್ಣ ಗೌಡ, ಮಹೇಶ ಆನೇಗುಂದಿ, ವಿಶ್ವರಾಧ್ಯ ಸತ್ಯಂಪೇಟೆ, ಬಸವರಾಜ ಆನೇಗುಂದಿ, ದೇವಿಂದ್ರಪ್ಪ ತೋಟಿಗೇರ, ಬಸವರಾಜ ಹಿರೇಮಠ, ಸಣ್ಣನಿಂಗಣ್ಣ ನಾಯ್ಕೋಡಿ, ರಾಜಶೇಖರ ಗಂಧದಮಠ, ಶರಣು ಗದ್ದುಗೆ, ಅಡಿವೆಪ್ಪ ಜಾಕಾ, ಚನ್ನಪ್ಪಗೌಡ ಶಿರವಾಳ, ಸುಧೀರ ಚಿಂಚೋಳಿ, ಮಲ್ಲು ಬುಕ್ಕಿಸ್ಟಗಾರ, ಮಹೇಶ ಗಂವ್ಹಾರ, ನಂದಣ್ಣ ಮೂಡಬೂಳ, ಬಸವರಾಜ ಹಂಚಿನಾಳ, ಗುಂಡಪ್ಪ ತುಂಬಗಿ, ಗುರುಮುದ್ದೀನ್, ಗಂಗಾಧರ ಚಟ್ರಕಿ, ಡಾ. ಜಗದೀಶ ಉಪ್ಪಿನ್, ಅಮರೇಶ ವಿಭೂತಿಹಳ್ಳಿ, ವಿಶ್ವನಾಥ ಸಾತಿಹಾಳ, ಬಸವರಾಜ ಚನ್ನೂರ, ಭಗವಂತ್ರಾಯ ಬಳೂಂಡಗಿ, ಶಿವಕುಮಾರ ಯಾದಗಿರಿ, ಸಂಗಣ್ಣ ಮೋಟಗಿ, ಮಹಾಂತಗೌಡ, ಗುರುರಾಜ ಕಾಮಾ, ಕರಿಬಸವ ಬಿರಾಳ, ಶಿವಪ್ಪ ಹಳಕಟ್ಟಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement