ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪರಿಷ್ಕರಣೆಯಾಗದ ಸಂಭಾವನೆ: ಪ್ರಾಧ್ಯಾಪಕರ ಒಕ್ಕೂಟ ಖಂಡನೆ

Lingaraj Badiger
Updated On : 16 May 2013, 11:18 am

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಬಹು ದಿನಗಳಿಂದ ಬೇಡಿಕೆ ಇರುವ ವಿವಿಧ ಪರೀಕ್ಷಾ ಕಾರ್ಯಗಳಾದ ಹಿರಿಯ ಬಾಹ್ಯ ಮೇಲ್ವಿಚಾರಕರ, ಕಸ್ಟೋಡಿಯನ್, ಸ್ಕ್ವಾಡ್, ಪ್ರಶ್ನೆ ಪತ್ರಿಕೆಯ ಜೋಡಣೆ ಹಾಗೂ ಮೌಲ್ಯಮಾಪಕರ ಸಂಭಾವನೆ ಭತ್ಯೆಯನ್ನು ಪರಿಷ್ಕರಿಸದೆ ಇರುವುದಕ್ಕೆ ಹೈ.ಕ. ಸರ್ಕಾರಿ ಕಾಲೇಜು ಪ್ರಾಧ್ಯಾಪಕರ ಒಕ್ಕೂಟ ಖಂಡಿಸಿದೆ.
  ಅಗತ್ಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿರುವಾಗ ಹಳೆಯ ಭತ್ಯೆ ಪದ್ಧತಿಯನ್ನು ಮುಂದುವರಿಸಿರುವುದರಿಂದ ಅಧ್ಯಾಪಕರಿಗೆ ಆರ್ಥಿಕವಾಗಿ ಅನ್ಯಾಯ ಮಾಡುತ್ತಿರುವ ವಿಶ್ವವಿದ್ಯಾಲಯದ ಸಂವಿಧಾನದ ವಿರೋಧಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈಗಿರುವ ಬಾಹ್ಯ ಹಿರಿಯ ಮೇಲ್ವಿಚಾರಕರ ಭತ್ಯೆ 375, ಆಂತರಿಕ ಮೇಲ್ವಿಚಾರಕರ ಭತ್ಯೆ 175, ಪ್ರಶ್ನೆಪತ್ರಿಕೆ ಸೆಟ್ಟರ್ 300, ಸ್ಕ್ವಾಡ್ ಸದಸ್ಯರ ಭತ್ಯೆ 400 ಇದ್ದು, ಅದನ್ನು ಕ್ರಮವಾಗಿ 500, 300, 600 ಮತ್ತು 800 ರು.ಗಳಿಗೆ ಹೆಚ್ಚಿಸಿ ಪರೀಕ್ಷಾ ಕಾರ್ಯಗಳನ್ನು ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದು ವಿಶ್ವವಿದ್ಯಾಲಯದ ಕುಲಸಚಿಗಳಿಗೆ ಮನವಿ ಮಾಡಿದೆ.
ಒಂದು ವೇಳೆ ಈ ಬೇಡಿಕೆಗೆ ಸ್ಪಂದಿಸದಿದ್ದರೆ ಕಾರ್ಯಸೌಧದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಡಾ. ಶರಣಪ್ಪ ಸೈದಾಪುರ, ಡಾ. ನಾಗಪ್ಪ ಗೋಗಿ, ಪ್ರೊ. ವಿಜಯಕುಮಾರ ಹೆಬ್ಬಾಳಕರ್, ಡಾ. ಮಲ್ಲಿಕಾರ್ಜುನ ಶೆಟ್ಟಿ ಹಾಗೂ ಹಲವಾರು ಪ್ರಾಧ್ಯಾಪಕರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement