ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪುರಸಭೆಯಿಂದ ಬಸವ ಜಯಂತಿ

Lingaraj Badiger
Updated On : 16 May 2013, 11:17 am

ಗುಲ್ಬರ್ಗ/ಶಹಾಬಾದ್: ವಾಡಿ ಪುರಸಭೆ ಕಚೇರಿಯಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತ್ಯುತ್ಸವನ್ನು ಪುರಸಭೆ ಅಧ್ಯಕ್ಷ ಹಸೀನಾ ಬೇಂಗಂ ಖುರೇಶಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು.
ಮುಖ್ಯಾಧಿಕಾರಿ ರಮೇಶ ಪಟ್ಟೇದಾರ ಜ್ಯೋತಿ ಬೆಳಗಿಸಿ ಮಾತನಾಡಿ, 12ನೇ ಶತಮಾನದಲ್ಲಿ ಸಮಾಜದ ಎಲ್ಲರಿಗೂ ಸಮಾನ ನ್ಯಾಯ, ಗೌರವ ದೊರೆಯಬೇಕೆಂದು ಪ್ರತಿಪಾದಿಸಿದ ಕ್ರಾಂತಿ ಪುರುಷರಾಗಿದ್ದರು, ಜನರಲ್ಲಿ ಜಾಗೃತಿ ಉಂಟು ಮಾಡಿ ಕಾಯಕ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ನೀಲಯ್ಯ ಸ್ವಾಮಿ ಪೂಜೆ ಸಲ್ಲಿಸಿದರು. ಪುರಸಭೆ ಉಪಾಧ್ಯಕ್ಷ ಮಲ್ಲೇಶಿ ಚುಕ್ಕೇರ್, ಸದಸ್ಯರಾದ ಸೂರ್ಯಕಾಂತ ರದ್ದೆವಾಡಿ, ಮುತ್ತಯ್ಯ ಸ್ವಾಮಿ, ಚಾಂದಮಿಯ್ಯ, ಮಜರ್ ಹುಸೇನ್, ಅಂಬಾದಾಸ, ಕೀಶನ ಜಾಧವ, ಲಕ್ಷ್ಮೀಬಾಯಿ ಠಾಕೂರ ಸಿಂಗ್, ಸುನೀತಾ ದೊರಿ, ಸಿಬ್ಬಂದಿ ವಿರುಪಾಕ್ಷಿ, ನಿಜಗುಣಿ, ಕಾಶೆಟ್ಟಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement