ಸುರಪುರದಲ್ಲಿ ಶ್ರೀರಾಮ ಜಪಯಜ್ಞ
ಸುರಪುರ: ಪಟ್ಟಣದ ಶ್ರೀರಾಮ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮ ಜಪಯಜ್ಞ ನಿಮಿತ್ತ ವಿಷ್ಣು ಹೋಮವನ್ನು ಮಂಗಳವಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಹಿಂಪ ಉತ್ತರ ಕರ್ನಾಟಕದ ಸಂಚಾಲಕ ಡಾ. ಸುರೇಶ ಹೇರೂರ್ ಅವರು ಶ್ರೀರಾಮ ರಕ್ಷಾ ಜಪಯಜ್ಞದ ಹಿನ್ನೆಲೆಯನ್ನು ವಿವರಿಸಿದರು. ವಿಹಿಂಪನ ತಾಲೂಕು ಅಧ್ಯಕ್ಷ ರಾಜಾ ಪಿಡ್ಡನಾಯಕ ಪ್ಯಾಪ್ಲಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹೋಮಕ್ಕೆ ವೇದಮೂರ್ತಿ ಜ್ಞಾನರಾಜ ಕನಕಗಿರಿ, ವೇ. ಪ್ರಶಾಂತ ಪುರೋಹಿತ, ವೇ. ನಾರಯಣಶಾಸ್ತ್ರಿ ಹೆಬ್ಬಾಳಕರ್ ಪೌರೋಹಿತ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವೇಣುಗೋಪಾಲಸ್ವಾಮಿ ಮಹಿಳಾ ಭಜನಾ ಮಂಡಳಿಯವರು ಭಾಗವಹಿಸಿ ಶ್ರೀರಾಮ ರಕ್ಷಾ ಸ್ತ್ರೋತ್ರ ಹಾಗೂ ರಾಮನಾಮ ಗೀತಾವಳಿಗಳನ್ನು ನಡೆಸಿಕೊಟ್ಟರು.
ವಿಹಿಂಪ ಮುಖಂಡರಾದ ಪ್ರಹ್ಲಾದರಾವ್ ಕುಳಗೇರಿ, ಗುರುನಾಥರೆಡ್ಡಿ ಶೀಲವಂತ ಹಾಗೂ ಶಂಕರಾಚಾರ್ಯ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.