ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚಿಂಚೋಳಿ; ಸಹ ಶಿಕ್ಷಕಿ ಭುವನೇಶ್ವರಿ ಆತ್ಮಹತ್ಯೆ

Mainashree
Updated On : 17 May 2013, 11:40 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 16
ಚಿಂಚೋಳಿ ತಾಲೂಕಿನ ರಟಕಲ್ ತಾಂಡಾದಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ನಿವಾಸಿ ಭುವನೇಶ್ವರಿ ಕೊರಮಯ್ಯ(25) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಭುವನೇಶ್ವರಿ ತನ್ನ ತಂದೆ ಕೊರಮಯ್ಯ ಹಾಗೂ 2 ವರ್ಷದ ಮಗುವಿನೊಂದಿಗೆ ರಟಕಲ್ ತಾಂಡಾದ ಮನೆಯಲ್ಲಿ ವಾಸವಾಗಿದ್ದಳು. ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 4.30ಕ್ಕೆ ಮಗಳು ನೇಣು ಹಾಕಿಕೊಂಡಿರುವುದನ್ನು ನೋಡಿದ್ದಾಗಿ ಕೊರಮಯ್ಯ ಪೊಲೀಸರಿಗೆ ತಿಳಿಸಿದ್ದಾರೆ.
ಭುವನೇಶ್ವರಿ ಅವರನ್ನು ಎರಡೂವರೆ ವರ್ಷದ ಹಿಂದೆ ಕೊರಮಯ್ಯನವರ ಹತ್ತಿರದ ಸಂಬಂಧ ನಟರಾಜ ಜತೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ನಟರಾಜ ಜತೆಗೆ ಒಂದು ತಿಂಗಳು ಮಾತ್ರ ಸಂಸಾರ ನಡೆಸಿದ್ದರು ಎನ್ನಲಾಗಿದೆ. ನಂತರ ಭುವನೇಶ್ವರಿ ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಹದಿರಾಳು ನಿವಾಸಿ ಹೇಮಂತರಾಜ ಜತೆ ಮದುವೆಯಾಗಿದ್ದರು ಎನ್ನಲಾಗಿದ್ದು, ಇವರ ಕಿರುಕುಳವೇ ಸಾವಿಗೆ ಕಾರಣ ಎಂದು ದೂರಲಾಗಿದೆ.
ಮಂಗಳವಾರ ಬ್ಯಾಂಕಿಗೆ ಹೋಗಿ ಸಂಬಳದ ಹಣ ತಂದು ಬೆಳಗ್ಗೆ ಸಾವಿಗೆ ಶರಣಾಗಿದ್ದಾರೆ. ನನ್ನ ಮಗಳಿಗೆ ಪತಿ ಹೇಮಂತರಾಜ ದೂರವಾಣಿ ಮೂಲಕ ನೀಡುತ್ತಿದ್ದ ಮಾನಸಿಕ ಹಿಂಸೆಯನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ಕೊರಮಯ್ಯ ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಎಂ. ವರದರಾಜು ಭೇಟಿ ನೀಡಿದ್ದಾರೆ. ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement