ಸಂಕ್ಷಿಪ್ತ ಸುದ್ದಿ
ಇಂದಿನಿಂದ ಕುಡಿವ ನೀರಿನ ಸರಣಿ ಸಭೆ
ಗುಲ್ಬರ್ಗ: ಜಿಲ್ಲೆಯ ಎಲ್ಲ ತಾಲೂಕು ಹಾಗೂ ಗ್ರಾಪಂ.ಗಳ ವ್ಯಾಪ್ತಿಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಅವರ ಅಧ್ಯಕ್ಷತೆಯಲ್ಲಿ ಮೇ 18ರಿಂದ ಜರುಗಲಿವೆ. ತಾಲೂಕಾವಾರು ಸಭೆ ನಡೆಯುವ ದಿನಾಂಕ ಮತ್ತು ಸಮಯ ಇಂತಿದೆ- ಗುಲ್ಬರ್ಗ- ಮೇ 18ರಂದು ಬೆಳಗ್ಗೆ 10 ಗಂಟೆಗೆ, ಚಿಂಚೋಳಿ- ಮೇ 20ರ ಬೆಳಗ್ಗೆ 11 ಗಂಟೆಗೆ, ಸೇಡಂ- 21ರ ಬೆಳಗ್ಗೆ 10ರಿಂದ 1.30ರವರೆಗೆ, ಚಿತ್ತಾಪುರ- 21ರ ಮಧ್ಯಾಹ್ನ 2.30ರಿಂದ 5.30ರವರೆಗೆ, ಆಳಂದ- 22ರ ಬೆಳಗ್ಗೆ 10 ಗಂಟೆವರೆಗೆ, ಅಫಜಲ್ಪುರ- 23ರ ಬೆಳಗ್ಗೆ 10 ಗಂಟೆಗೆ ಹಾಗೂ ಜೇವರ್ಗಿ- 24ರ ಬೆಳಗ್ಗೆ 10 ಗಂಟೆಗೆ. ಈ ಸಭೆಯಲ್ಲಿ ಬೇಸಿಗೆ ಕಾಲದ ಗ್ರಾಮೀಣ ಭಾಗದ ಕುಡಿಯವ ನೀರಿನ ಸಮಸ್ಯೆ, 2012-13ರ ಗ್ರಾಪಂ ಡಿಸಿಬಿ ಸಾಧನೆಯ ಪರಿಶೀಲನೆ ಮತ್ತು 2013-14ಕ್ಕೆ ಮಾಸಿಕವಾರು ಗುರಿ ನಿಗದಿಪಡಿಸುವುದು. ಎಂಜಿಎನ್ಆರ್ಇಜಿಎಸ್ ಅಡಿಯಲ್ಲಿ 2012-13ರ ಅನುಷ್ಠಾನದ ಕುರಿತು ಪರಿಶೀಲನೆ ಹಾಗೂ 2013-14ನೇ ಸಾಲಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುವುದು, 13ನೇ ಹಣಕಾಸು 2012-13ನೇ ಸಾಲಿನ ಪ್ರಗತಿ ಪರಿಶೀಲನೆ ಮತ್ತು 2013-14ನೇ ಸಾಲಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುವುದು, ಗ್ರಾಪಂ ಆಯವ್ಯಯ ಹಾಗೂ ವಾರ್ಷಿಕ ಆಡಳಿತ ವರದಿ ಸಿದ್ಧಪಡಿಸಿ ಗ್ರಾಪಂ ಮತ್ತು ತಾಪಂ ಅನುಮೋದನೆ ಮಾಡಿರುವ ಕುರಿತು, ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ, ಲೆಕ್ಕ ಶಾಖೆಗೆ ಸಂಬಂಧಿಸಿದಂತೆ(ವಿವಿಧ ಯೋಜನೆಗಳ ಅಡಿಟ್, ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸುವುದು ಮತ್ತು ಪಂಚತಂತ್ರ), ಬಿಆರ್ಜಿಎಫ್ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.