ಹಫ್ತಾ ವಸೂಲಿಗಾರರಿಂದ ಮನೆ ದರೋಡೆ
ಗುಲ್ಬರ್ಗ: ಹಫ್ತಾ ನೀಡಲು ನಿರಾಕರಿಸಿದಕ್ಕೆ ನಾಲ್ಕೈದು ಜನ ಸೇರಿ ಬೆದರಿಸಿ ಮನೆಯಲ್ಲಿದ್ದ ನಗದು 2 ಲಕ್ಷ ಮತ್ತು 45 ಸಾವಿರ ಮೌಲ್ಯದ ಬಂಗಾರದ ಚೈನ್, ಉಂಗುರ ದೋಚಿಕೊಂಡು ಪರಾರಿಯಾದ ಘಟನೆ ಕಳೆದ ಮಂಗಳವಾರ ರಾತ್ರಿ 10 ಗಂಟೆಗೆ ನಗರದ ಸಿಐಬಿ ಕಾಲೋನಿಯಲ್ಲಿ ನಡೆದಿದೆ.
ಸಿಐಬಿ ಕಾಲೋನಿಯ ಉತ್ತರಪ್ರದೇಶ ಮೂಲದ ಕೆಲ್ಕರ್ ಮನೆಯ ಬಾಡಿಗೆ ನಿವಾಸಿಯಾಗಿರುವ ಅಭಿಪ್ರಕಾಶ ನಾರಾಯಣ ತಂದೆ ಶಂಭುನಾಥ ಬಿಂದ ಅವರಿಗೆ ಬೆದರಿಸಿ ಮನೆ ಲೂಟಿ ಮಾಡಿದ್ದಾರೆ. ನಗರದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಬ್ ಕಾಂಟ್ರ್ಯಾಕ್ಟರ್ ಎಂದು ಕೆಲಸ ಮಾಡುತ್ತಿರುವ ಅಭಿಪ್ರಕಾಶ ನಾರಾಯಣ ಕೆಲಸದ ನಿಮಿತ್ತ ಹೊರಗಡೆ ಹೋದ ಸಂದರ್ಭದಲ್ಲಿ ಶಶಿ, ಅನೀಲ್ ಎಂಬುವರು ಹಫ್ತಾ ನೀಡಬೇಕು ಎಂದು ಹೇಳಿ ಜಗಳ ತೆಗೆದಾಗ ದಂಪತಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ನೀಡಿದ್ದರು. ಆಗ ಕಪಿಲ್ ಎಂಬಾತ ಠಾಣೆಗೆ ಬಂದು ರಾಜೀ ಮಾಡಿಸಿದ್ದರು.