ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಧರ್ಮ ರಕ್ಷಣೆ ಮಠಾಧೀಶರ ಕರ್ತವ್ಯ: ರಂಭಾಪುರಿಶ್ರೀ

Lingaraj Badiger
Updated On : 18 May 2013, 11:55 am

ಕನ್ನಡಪ್ರಭ ವಾರ್ತೆ  ಚಿತ್ತಾಪುರ  ಮೇ 17
ಧರ್ಮ ಸಂರಕ್ಷಣೆ ಮಠಾಧೀಶರ ಕರ್ತವ್ಯವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ವೀರಸೋಮೇಶ್ವರ ಶಿವಾಚಾರ್ಯರು ನುಡಿದರು.
ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಜರುಗಿದ ಶಾಂತೇಶ್ವರ ಹಿರೇಮಠದ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಂಪದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ವೀರಶೈವ ಧರ್ಮದ ಸಂಸ್ಕೃತಿ ವಿಶಿಷ್ಟವಾದದ್ದು. ಇದು ಜಾತಿ- ಮತ- ಪಂಥಗಳ ಗಡಿ ಮೀರಿ ಎಲ್ಲರ ಶ್ರೇಯಸ್ಸಿಗೆ ಶ್ರಮಿಸಿದ ವಿಶಾಲ ಧರ್ಮವಾಗಿದೆ ಎಂದರು.
ನೀತಿ- ಧರ್ಮಗಳ ಮಠಾಧೀಶರ ಕರ್ತವ್ಯ: ವೈಚಾರಿಕತೆಯ ಸುಳಿಗಾಳಿಗೆ ಸಿಲುಕಿರುವ ಧರ್ಮವನ್ನು ಉಳಿಸುವ ಅವಶ್ಯಕತೆಯಿದೆ. ಧರ್ಮ ಸಂಸ್ಕೃತಿ ಮತ್ತು ಪರಂಪರೆಗಳನ್ನು ನಿರ್ಲಕ್ಷ್ಯ ಮಾಡಬಾರದು, ನೀತಿ ಧರ್ಮಗಳ ಸಂರಕ್ಷಣೆ ನಾಡಿನ ಮಠಾಧೀಶರ ಗುರಿಯಾಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪಟ್ಟಾಧಿಕಾರ ವಹಿಸಿಕೊಂಡ ಡಾ. ಶಾಂತ ಸೋಮನಾಥ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಮೌಲ್ಯಗಳನ್ನು ಬೇಳೆಸುವುದು. ಧರ್ಮ, ಸಂಸ್ಕೃತಿ ಎತ್ತಿ ಹಿಡಿಯುವ ಸಂಕಲ್ಪ ನಮ್ಮದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಬನಮಿಯ ರಾಚೋಟೇಶ್ವರ ಶಿವಾಚಾರ್ಯರು, ಚೌಡಪುರದ ಚಿತ್ರಶೇಖರ ಶಿವಾಚಾರ್ಯರು, ಎಮ್ಮಿಗನೂರ ವಾಮದೇವ ಶಿವಾಚಾರ್ಯರು ಉಪದೇಶ ನೀಡಿದರು.
ದುದನಿಯ ಡಾ, ಶಾಂತಲಿಂಗ ಸ್ವಾಮೀಜಿ, ಹೊನ್ನಕಿರಣಿಗಿಯ ಶತಾಯುಷಿ ಕರಿಬಸವ ಶಿವಾಚಾರ್ಯರು, ಚಂದ್ರಗುಂಡ ಶಿವಾಚಾರ್ಯರು, ಸಿದ್ದರಾಮ ಶಿವಾಚಾರ್ಯರು ಸೇರಿದಂತೆ ಕಾಳಗಿ, ಹೊಸಳ್ಳಿ, ಕೋಡ್ಲಿ, ಭರತನೂರ, ನಿಡಗುಂದಾ, ಶ್ರೀನಿವಾಸ ಸರಡಿಗಿ, ಪಾಳಾ, ಸೇಡಂ, ಚಳಗೇರಿ, ರಟಕಲ್, ಪೇಠಶಿರೂರ  ಸ್ವಾಮೀಜಿ ಉಪಸ್ಥಿತರಿದ್ದರು.
ಜಗದೇವ ಗುತ್ತೇದಾರ, ಜಿಪಂ ಸದಸ್ಯ ಶಂಭುಲಿಂಗ ಗುಂಡಗುರ್ತಿ, ಮಾಜಿ ಜಿಪಂ ಸದಸ್ಯ ಭೀಮರಾಯ ತೇಗಲತಿಪ್ಪಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಹೇರೂರ್, ಶಿವಶರಣಪ್ಪ ಸಿರಿ, ನಿಂಬೆಣ್ಣಪ್ಪ ಕೋರವಾರ, ವೀರೇಂದ್ರ ಪಾಟೀಲ್, ಸಂತೋಷ ಪಾಟೀಲ್, ಸಂತೋಷ ಚವ್ಹಾಣ, ಬೋಜಣ್ಣ ಪವಾರ, ನಾಗೇಂದ್ರ ಪಾಟೀಲ್ ಪಾಲ್ಗೊಂಡಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಡಾ. ಉಮೇಶ ಜಾದವ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಮಡಿವಾಳಯ್ಯ ಶಾಸ್ತ್ರೀ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement