ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಶಹಾಪುರ: ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ 11 ವಸತಿ ನಿಲಯಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಶಹಾಪುರದ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ಹಾಗೂ ಅಲ್ಪಸಂಖ್ಯಾತರ ಬಾಲಕಿಯರ ವಸತಿ ನಿಲಯ, ದೋರನಹಳ್ಳಿ, ಶಿರವಾಳ, ಹೈಯಾಳ.ಬಿ., ಕೊಂಕಲ್, ವಡಿಗೇರಾ, ಬೆಂಡೆಬೆಂಬಳಿ, ನಾಗನಟಿಗಿ, ಗೋಗಿಪೇಠ, ದರ್ಶನಾಪುರ, ವನದುರ್ಗ ಹಾಗೂ ಗೋಗಿ ಕೆ.(ಬಾಲಕಿಯರ) ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.