ಹಿಂಗುಳಾಂಬಿಕಾ ಉತ್ಸವ, ದೇವಿಯ ಮೆರವಣಿಗೆ
ಶಹಾಪುರ: ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಹಿಂಗುಳಾಂಬಿಕಾ ದೇವಿಯ ಉತ್ಸವವನ್ನು ಅದ್ಧೂರಿಯಿಂದ ಆಚರಿಸಲಾಯಿತು.
ಶುಕ್ರವಾರ ಬೆಳಗ್ಗೆ ಸುಮಂಗಲೆಯರು ಪೂರ್ಣಕುಂಭದೊಂದಿಗೆ ದೇವಿಯ ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಹಿಂಗುಳಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧರ್ಮಸಭೆ, ಹೋಮ ಹವನಗಳು ಶ್ರದ್ಧಾ- ಭಕ್ತಿಯಿಂದ ಜರುಗಿದವು. ಸಮಸ್ತ ಭಾವಸಾರ ಕ್ಷತ್ರಿಯ ಸಮಾಜದ ಬಂಧುಗಳು, ತರುಣ ಸಂಘದವರು ಪಾಲ್ಗೊಂಡಿದ್ದರು.
ಪ್ರಮುಖರಾದ ಗೋಪಾಲರಾವ ಬಾಸುತ್ಕರ, ಮನೋಹರ ಪುಲಸೆ, ತುಳಜಾರಾಮ ಬಾಸುತ್ಕರ, ಗಿರಿಧರ ಬಾಸುತ್ಕರ, ರಾಮಣ್ಣಾ ಭಾಸುತ್ಕರ, ತಿರುಪತಿ ಘನಾತೆ, ಮಾರುತಿ ಮಹೇಂದ್ರಕರ ಇತರರು ಇದ್ದರು.