ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದಾಖಲಾದ ರೋಗಿಗಳ ಪರಿಸ್ಥಿತಿ ಹತೋಟಿಗೆ

Vishwanath S
Updated On : 19 May 2013, 11:58 am

ಕನ್ನಡಪ್ರಭ ವಾರ್ತೆ ,  ಆಳಂದ ,  ಮೇ 18
ಕಳೆದ ನಾಲ್ಕಾರು ದಿನಗಳಿಂದಲೂ ತಾಲೂಕಿನ ಭೂಸನೂರ ಗ್ರಾಮದಲ್ಲಿ ಸುಮಾರು 58ಕ್ಕೂ ಹೆಚ್ಚು ಜನರಿಗೆ ಅತಿಯಾದ ಭೇದಿ ಪ್ರಕರಣ ಎದುರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.
ಗ್ರಾಮದಲ್ಲಿ ಪೂರೈಕೆಯಾಗುವ ಕಲುಷಿತ ನೀರು ಸೇವನೆಯೇ ಇದಕ್ಕೆ ಪ್ರಮುಖ ಕಾರಣ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಚಿತ್ರಾ ಬಿಲಗುಂದಿ ಅವರು ಸ್ಪಷ್ಟಪಡಿಸಿದ್ದಾರೆ.
ಪರಿಸ್ಥಿತಿ ಹತೋಟಿಗೆ: ಇದುವರೆಗೂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 12 ಮಂದಿ ದಾಖಲಾಗಿದ್ದು, ಅದರಲ್ಲಿ 10 ಮಂದಿಗೆ ಭೇದಿ, ಇನ್ನಿಬ್ಬರಿಗೆ ವಾಂತಿ ಮತ್ತು ಭೇದಿಯಿಂದ ದಾಖಲಾಗಿದ್ದು, ಚಿಕಿತ್ಸೆ ನೀಡಿ ಪರಿಸ್ಥಿತಿ ಹತೋಟಿಗೆ ತರಲಾಗಿದೆ ಎಂದರು.
ಕೆಲವರು ಗುಲ್ಬರ್ಗ ಹಾಗೂ ಸೋಲಾಪುರದ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಗ್ರಾಮದ ಮುಖಂಡ ರಾಜಶೇಖರ ಮಲಶೆಟ್ಟಿ ಅವರು ಹೇಳಿದರು.
ಭೂಸನೂರಿಗೆ ಶುಕ್ರವಾರ ತಮ್ಮ ಸಂಬಂಧಿಗಳ ಮದುವೆಗೆ ಆಗಮಿಸಿದ್ದ ಚಂದಪ್ಪ ಶ್ರೀಶೈಲ್ ಹರಳಯ್ಯಾ (48) , ರೇವಣಸಿದ್ಧಪ್ಪ ಚಂದಪ್ಪ ಖಜೂರಿ (30), ಗ್ರಾಮದ ಭಾರತಿ ಬಸವರಾಜ ಅವರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ ಎಂದು ಆರೋಗ್ಯ ಕೇಂದ್ರದ ಔಷಧಿ ಅಧಿಕಾರಿ ಡಾ. ಆತ್ತರ ಜಮೀರ್ ಅವರು ತಿಳಿಸಿದ್ದಾರೆ.
ಹೊಸ ಪೈಪಲೈನ್ ಕೈಗೊಳ್ಳಿ: ಗ್ರಾಮದಲ್ಲಿನ ಹಳೆಯ ಕಾಲದ ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆಯಿಂದಾಗಿ ಕಳೆದೆರಡೂ ವರ್ಷಗಳಿಂದ ಇಂಥ ಪ್ರಕರಣ ಸಂಭವಿಸುತ್ತಿದೆ. ಗ್ರಾಪಂ ಅಥವಾ ಜಿಪಂ ಅವರು ತಕ್ಷಣವೇ ಬೋರುವೆಲ್‌ನಿಂದ ಟ್ಯಾಂಕ್‌ವರೆಗೆ ಹೊಸ ಪೈಪಲೈನ್ ಕೈಗೊಂಡು ಶುದ್ಧವಾದ ನೀರು ಒದಗಿಸಬೇಕೆಂದು ಮುಖಂಡ ಬಾಬುಗೌಡ ಪಾಟೀಲ್ ಒತ್ತಾಯಿಸಿದ್ದಾರೆ.
ವೈದ್ಯರ ಸಲಹೆ: ಗ್ರಾಮದ ಬೋರುವೆಲ್ ಹಾಗೂ ಭಾವಿಗಳ ನೀರಿನ ಪರೀಕ್ಷೆ ಕೈಗೊಂಡ ಬಳಿಕೆ ಮೂರು ಕಡೆಯ ನೀರು ಕುಡಿಯಲು ಯೋಗ್ಯವಿಲ್ಲವಾಗಿದೆ. ಇನ್ನೂ ಮೂರು ಕಡೆಯ ಮಾತ್ರ ನೀರು ಕುಡಿಯಲು ಬಳಸಬಹುದಾಗಿದೆ. ವಿಶೇಷವಾಗಿ ಗ್ರಾಮಸ್ಥರು ನೀರು ಕಾಯಿಸಿ ಆರಿಸಿ ಕುಡಿಯಬೇಕೆಂದು ಆರೋಗ್ಯಾಧಿಕಾರಿ ಸುಚಿತ್ರಾ ಬಿಲಗುಂದಿ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement