ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರತಿಭಾನ್ವಿತರಿಗೆ ಸನ್ಮಾನ; ಶ್ರೇಷ್ಠ ಕಾರ್ಯ

Rashmi Kasaragodu
Updated On : 20 May 2013, 11:26 am

ಕ.ಪ್ರ. ವಾರ್ತೆ  ಹುಣಸಗಿ  ಮೇ 19
ಹುಣಸಗಿ: ಸಮೀಪದ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆ ಮತ್ತು ಸುರಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಪ್ರತಿಭಾ ಸನ್ಮಾನ ಕಾರ್ಯಕ್ರಮ ನಡೆಯಿತು.
  ಇತ್ತೀಚಿಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕ ಗಳಿಸಿದ ರಂಗಂಪೇಟೆಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಐಶ್ವರ್ಯ ಸುಖಾನಂದ ತೋಟದ್ ಅವರನ್ನು ಸನ್ಮಾನಿ ಗೌರವಿಸಲಾಯಿತು.
ಸಾಧನೆ: ವಿದ್ಯಾರ್ಥಿನಿಯನ್ನು ಸನ್ಮಾನಿಸಿದ ಶಿಕ್ಷಣಾಧಿಕಾರಿ ಎ.ವಿ. ಕೆಂಪರಂಗಯ್ಯ ಮಾತನಾಡಿ, ಪ್ರತಿಭಾವಂತರನ್ನು ಗುರ್ತಿಸಿ ಸನ್ಮಾನಿಸುವುದು ನಿಜವಾಗಿಯೂ ಶ್ರೇಷ್ಠವಾದ ಮತ್ತು ಅನುಕರಣೀಯ ಕಾರ್ಯ. ಇದರಿಂದ ಎಲ್ಲರಲ್ಲೂ ಸಾಧನೆ ಮಾಡಬೇಕೆಂಬ ಛಲ ಮೂಡಿಸುತ್ತದೆ. ಈ ದಿಸೆಯಲ್ಲಿ ಸಂಘಸಂಸ್ಥೆ ಹಾಗೂ ಪರಿಷತ್ತು ಮಾಡುತ್ತಿರುವ ಪ್ರತಿಭಾ ಸನ್ಮಾನ ಶ್ಲಾಘನೀಯ ಎಂದರು.
ಪ್ರಶಂಸೆ: ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ರಾಜನಕೋಳೂರು ಮಾತನಾಡಿ, ಸರ್ಕಾರಿ ಶಾಲೆ, ಕಾಲೇಜುಗಳೆಂದರೆ ಮೂಗು ಮುರಿಯುವವರಿಗೆ ಐಶ್ವರ್ಯ ತನ್ನ ಅಗಾಧ ಸಾಧನೆ ಮೂಲಕ ತಕ್ಕ ಉತ್ತರ ನೀಡಿದ್ದಾಳೆ ಎಂದು ಪ್ರಶಂಸಿಸಿದರು. ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿ ಐಶ್ವರ್ಯ ತೋಟದ್, ತನ್ನ ಸಾಧನೆಗೆ ಗುರುಗಳ ಮತ್ತು ತಂದೆ ತಾಯಿಗಳ ಪ್ರೋತ್ಸಾಹ, ಮಾರ್ಗದರ್ಶನವೇ ಕಾರಣ ಎಂದು ಹೇಳಿದರು.
  ಚುಸಾಪದ ಶಿವಶರಣಪ್ಪ ಸಿರೂರ್, ಬಸಯ್ಯ ಗಣಾಚಾರಿ, ವೀರಯ್ಯ ಕೊಳ್ಳಿಮಠ, ತೋಟದ್ ದಂಪತಿಗಳು, ರೆಹನಾ ಬೇಗಂ, ರತ್ನಾಧರಿ, ಸುಖಾನಂದ ತೋಟದ ಇದ್ದರು. ಚುಸಾಪ ಜಿಲ್ಲಾ ಸಂಚಾಲಕ ಅಮರಯ್ಯಸ್ವಾಮಿ ಜಾಲಿಬೆಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಪಮ್ಮ ಹಿರೇಮಠ ಸ್ವಾಗತಿಸಿದರು. ನಜಮಾ ಬೇಗಂ ನಿರೂಪಿಸಿದರು. ಶಿವಶರಣಪ್ಪ ಶಿರೂರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement