ಬಾಬುರಾವ ಚಿಂಚನಸೂರ ಸಂಪುಟ ಪ್ರವೇಶ; ದಸಂಸ ಹರ್ಷ
ಯಾದಗಿರಿ: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಾಬುರಾವ ಚಿಂಚನಸೂರ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸಮಿತಿಯ ಜಿಲ್ಲಾಧ್ಯಕ್ಷ ಚಿದಾನಂದ ಕಿಲ್ಲನಕೇರಿ ಮಾತನಾಡಿ, ಜಿಲ್ಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ದೀನ ದಲಿತರ ಉದ್ಧಾರಕ್ಕೆ ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜು ಹೊಸಳ್ಳಿಕರ್, ರಡ್ಡಿ ಖಾನಳ್ಳಿ, ಭೀಮರಾಯ ಬಸಂತಪುರ, ಮಲ್ಲಿಕಾರ್ಜುನ ಕೌಳೂರ, ರಾಮಣ್ಣ ಗೌಡಗೇರಿ, ಬಸವರಾಜ ಕೌಳೂರ್ ಹರ್ಷ ವ್ಯಕ್ತಪಡಿಸಿದ್ದಾರೆ.