ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತೀರ್ಪಿಗೆ ತಲೆಬಾಗಿ ಅಭಿವೃದ್ಧಿಗಾಗಿ ದುಡಿವೆ: ಬಿಆರ್ಪಿ

Rashmi Kasaragodu
Updated On : 21 May 2013, 12:06 pm

ಆಳಂದ: ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಮಗೆ ನೀಡಿದ ಗೆಲವಿನ ಐತಿಹಾಸಿಕ ತೀರ್ಪಿಗೆ ತಲೆಬಾಗಿ ಅಭಿವೃದ್ಧಿಗಾಗಿ ದುಡಿಯುವೆ ಎಂದು ನೂತನ ಶಾಸಕ ಬಿ.ಆರ್. ಪಾಟೀಲ್ ಭರವಸೆ ನೀಡಿದರು.
  ಪಟ್ಟಣದಲ್ಲಿ ಕೆಜೆಪಿ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಏರ್ಪಡಿಸಿದ್ದ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಈ ನನ್ನ ಗೆಲವು ಮತದಾರರ ಗೆಲವಾಗಿದೆ ಎಂದರು.
  ಕಾರ್ಯಕರ್ತರ ಹಾಗೂ ಮತದಾರರ ಋಣ ತೀರಿಸಲು ಆಗದು ಎಂದ ಅವರು, ಅಧಿಕಾರವಧಿಯುದ್ದಕ್ಕೂ ಎಲ್ಲ ಜಾತಿ, ಧರ್ಮದ ಜನರಿಗೆ ತಾರತಮ್ಯ ಹಾಗೂ ಪಕ್ಷ ಭೇದ ಮರೆತು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸ್ಪಂದಿಸಲಾಗುವುದು ಎಂದು ಹೇಳಿದರು.
ನೀರಾವರಿ, ಶೈಕ್ಷಣಿಕ ಕ್ರಾಂತಿಗೆ ಕ್ರಮ: ಹಿಂದಿನ ಅವಧಿಯಲ್ಲಿ ಪ್ರಸ್ತಾಪಿಸಿದ 200 ಕೆರೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು. ಶಿಕ್ಷಣ ಗುಣಮಟ್ಟ ಕುಸಿದಿರುವ ಈ ಭಾಗದ ಹೋಬಳಿ ಕೇಂದ್ರಗಳಲ್ಲಿ ಕಾಲೇಜುಗಳ ಸ್ಥಾಪನೆಗೆ ಒತ್ತು ನೀಡಿ, ಶೈಕ್ಷಣಿಕ ಕ್ರಾಂತಿ ಕೈಗೊಳ್ಳಲಾಗುವುದು. ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅಕ್ರಮ ಸಾರಾಯಿ ತಡೆಗೆ ಬದ್ಧನಾಗಿದ್ದೇನೆ ಎಂದರು.
  ಪುರಸಭೆ ಮಾಜಿ ಅಧ್ಯಕ್ಷ ವಿಠ್‌ಠಲರಾವ ಪಾಟೀಲ್, ಪಕ್ಷದ ರಾಜ್ಯ ಉಪಾಧ್ಯಕ್ಷ ಎಲ್. ಎಸ್.ರಾಠೋಡ, ತಾಲೂಕು ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ್, ಮುಖಂಡ ದತ್ತಾತ್ರೇಯ ಇಕ್ಕಳಕಿ, ಅಹ್ಮದ್ ಅಲಿ ಚುಲಬುಲ್, ಈರಣ್ಣ ಮದಗುಣಕಿ, ವಿಠ್ಠಲ ಶಿಂಧೆ ತಡೋಳ ಅನೇಕರು ಮಾತನಾಡಿದರು.
  ಜಿಪಂ ಸದಸ್ಯ ಮಂಗಲಾ ಅರವಿಂದ ನರೋಣಿ, ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ್, ಪಂಡಿತ ಶೇರಿಕಾರ, ಗುರುನಾಥ ಷಣ್ಮುಖ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಮುಖಂಡರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement