ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಡಿತರ ಚೀಟಿ ಅರ್ಜಿಗಾಗಿ ನೂಕುನುಗ್ಗಲು

Rashmi Kasaragodu
Updated On : 21 May 2013, 12:05 pm

ಚಿತ್ತಾಪುರ: ಇಲ್ಲಿನ ತಾಲೂಕು ಪಂಚಾಯತಿ ಕಚೇರಿ ಎದುರುಗಡೆ ಇರುವ ನಾಗಾವೇಲಾಂಬಿಕ ಡಿಟಿಪಿ ಕೇಂದ್ರದಲ್ಲಿ ತಾಲೂಕಿನ ಚಾಮನೂರ, ಕುನ್ನೂರ ಗ್ರಾಮಗಳಿಂದ ಹೊಸ ಪಡಿತರ ಚೀಟಿ ಪಡೆಯಲು ಜನ ಮುಗಿಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ.
ಸರ್ಕಾರ ಕಳೆದ ಎರಡು ತಿಂಗಳಿಂದ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ನಿಮಿತ್ತ ಹೊಸ ಪಡಿತರ ಚೀಟಿ ಪಡೆಯುವ ಪ್ರಕ್ರಿಯೆಗೆ ತಡೆ ನೀಡಿತ್ತು.
ತಾಲೂಕಿನ ಕೆಲವು ಖಾಸಗಿ ಕೇಂದ್ರಗಳನ್ನು ನೇಮಿಸದೆ ಇರುವುದರಿಂದ ದೂರದ ಊರುಗಳ ಜನರು ಚಿತ್ತಾಪುರಕ್ಕೆ ಬಂದು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು, ಪೋಟೋ ತೆಗೆಸಲು ಬೆಳಗ್ಗೆಯಿಂದ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಬೇಕಾಗಿದೆ.
ಹೀಗಾಗಿ ದೂರದಿಂದ ಬರುವ ಜನರು ತುಂಬಾ ತೊಂದರೆ ಪಡುತ್ತಿದ್ದು, ಆಯಾ ಗ್ರಾಪಂವಾರು ಪಡಿತರ ಕೇಂದ್ರ ಇದ್ದರೂ ಸಹ ಅವು ಕಾರ್ಯ ನಿರ್ವಹಿಸದೇ ಇರುವುದರಿಂದ ನಾವುಗಳು ಇಲ್ಲಿಗೆ ಬಂದು ತೊಂದರೆ ಪಡಬೇಕಾಗಿದೆ ಎಂದು ಜನರು “OÚ«Ú­sÚ®Úúڒ ಎದುರು ತಮ್ಮ ಗೋಳು ತೋಡಿಕೊಂಡರು.
ನೂರಾರು ರುಪಾಯಿ ಖರ್ಚು ಮಾಡಿ ಟಂಟಂ, ಜೀಪ, ಮಾಡಿಕೊಂಡು ಅರ್ಜಿ ಸಲ್ಲಿಸಲು ಬಂದರೆ ಇಲ್ಲಿ ಸರ್ವರ್ ಇಲ್ಲ, ಅಂಗಡಿ ತೆರೆದಿರುವುದಿಲ್ಲ, ಇಂಥಹ ಸಮಸ್ಯೆಗಳು ನಿತ್ಯವಾಗುತ್ತಿವೆ ಎಂದು ದೂರಿದರು.
ಸರ್ಕಾರ ಗ್ರಾಪಂಗಳಲ್ಲಿ ಪಡಿತರ ಅರ್ಜಿ ಸಲ್ಲಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅಲ್ಲೆ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement