ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಥಮ ಚಿಕಿತ್ಸೆ ಸಂಜೀವಿನಿ ಇದ್ದಂತೆ

Rashmi Kasaragodu
Updated On : 21 May 2013, 12:07 pm

ಹುಣಸಗಿ: ಅಪಘಾತ ನಡೆದ ಸಂದರ್ಭದಲ್ಲಿ ತಕ್ಷಣಕ್ಕೆ ಪ್ರಥಮ ಚಿಕಿತ್ಸೆ ದೊರೆಯದೇ ಪ್ರಾಣ ಕಳೆದು ಕೊಂಡವರು ಅನೇಕರು. ಇಂತಹ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸುವ ಪೊಲೀಸ್ ಸಿಬ್ಬಂದಿ ಆಪದ್ಬಾಂಧವ ಇದ್ದಂತೆ. ಆದ್ದರಿಂದ ಪೊಲೀಸರು ಪ್ರಥಮ ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಬೇಕು. ಇದು ಜೀವ ಉಳಿಸುವ ಸಂಜೀವಿನಿ ಇದ್ದಂತೆ ಎಂದು ಹುಣಸಗಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎಸ್.ಬಿ. ಪಾಟೀಲ ಹೇಳಿದರು.
ಹುಣಸಗಿ ಪೊಲೀಸ್ ಠಾಣೆ ಆವರಣದಲ್ಲಿ ಅಪಘಾತ ಸಂದರ್ಭದಲ್ಲಿ ಪೊಲೀಸರು ನಿರ್ವಹಿಸಬೇಕಾದ ತುರ್ತು ಪ್ರಥಮ ಚಿಕಿತ್ಸೆ ಕುರಿತು ಶುಕ್ರವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಅಗತ್ಯ ಮಾಹಿತಿ ನೀಡಿದರು.
ಪ್ರಥಮ ಚಿಕಿತ್ಸೆಯಿಂದ ಜೀವ ರಕ್ಷಣೆ: ಅಪಘಾತ ಸಂದರ್ಭದಲ್ಲಿ ತಕ್ಷಣದಲ್ಲಿ ಚಿಕಿತ್ಸೆ ನೀಡುವುದು ಮುಖ್ಯವಾಗಿರುತ್ತದೆ. ಆಸ್ಪತ್ರೆಗೆ ಸಾಗಿಸುವ ಮುನ್ನ ಸ್ಥಳದಲ್ಲಿರುವ ಪೊಲೀಸರು ಜೀವ ಉಳಿಸಲು ಬೇಕಾದ ಕೆಲ ಸುಲಭ ತಂತ್ರಗಳನ್ನು ಬಳಸಬೇಕಾಗುತ್ತದೆ. ತುರ್ತು ಚಿಕಿತ್ಸೆಯಿಂದ ಜೀವ ಉಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲಾ ಪೊಲೀಸರು ಈ ಪ್ರಥಮ ಚಿಕಿತ್ಸಾ ವಿಧಾನಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಮತ್ತೊಬ್ಬ ವೈದ್ಯಾಧಿಕಾರಿ ಡಾ. ಮಹಾಂತೇಶ ಕೊಣ್ಣೂರು, ಸುಟ್ಟ ಗಾಯಗಳಿಂದ, ಹುಚ್ಚುನಾಯಿ ಕಡಿತ, ಅತಿ ರಕ್ತ ಸೋರಿಕೆ ಸಂದರ್ಭಗಳಲ್ಲಿ ಗಾಯಾಳುವಿಗೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದನ್ನು ತಿಳಿಸಿದರು.
ಮೊದಲು ಮಾಡಬೇಕಾದ್ದು..: ಹುಣಸಗಿ ಸಿಪಿಐ ಎಂ.ಜಿ. ಸತ್ಯನಾರಾಯಣ ಮಾತನಾಡಿ, ಅಪಘಾತ ಸಂಭವಿಸಿದಾಗ ಪ್ರತ್ಯಕ್ಷವಾಗಿ ಕಂಡವರು ಮಾಹಿತಿ ನೀಡುವುದು ಮೊದಲು ಪೊಲೀಸರಿಗೆ. ನಾವು ಸ್ಥಳಕ್ಕೆ ಧಾವಿಸುವ ಮುನ್ನ ಮಾನಸಿಕವಾಗಿ ಧೈರ್ಯ ಹೊಂದಿರಬೇಕು. ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಬೇಕು. ಸಮಯಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪಿಎಸ್‌ಐ ವೀರಣ್ಣ ಹಳ್ಳಿ ಸ್ವಾಗತಿಸಿದರು. ಕೆಂಭಾವಿ ಪಿಎಸ್‌ಐ ಜಗನ್ನಾಥ ವಂದಿಸಿದರು. ಸುರಪುರ ಸಿಪಿಐ ರಾಜಕುಮಾರ ವಾಜಂತ್ರಿ, ಪಿಎಸ್‌ಐಗಳಾದ ಶೈಲಾಜಾ ಪ್ಯಾಟಿ, ಸುನೀಲ ನಾಯಕ, ಶರಣಬಸಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement