ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶೀಘ್ರ ಆರೋಗ್ಯ ಸೇವೆ ಒದಗಿಸಲು ಸೂಚನೆ

Rashmi Kasaragodu
Updated On : 21 May 2013, 12:05 pm

ಚಿಂಚೋಳಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಅತೀ ಶೀಘ್ರದಲ್ಲಿಯೇ ಭರ್ತಿಗೊಳಿಸಿ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವುದಾಗಿ ಶಾಸಕ ಡಾ. ಉಮೇಶ ಜಾಧವ ತಿಳಿಸಿದರು.
ದಿಢೀರನೇ ಪಟ್ಟಣದ ಚಂದಾಪುರ ನಗರದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿರುವ ಸಮಸ್ಯೆ, ವೈದ್ಯರ ಹುದ್ದೆಗಳ ಬಗ್ಗೆ ಮತ್ತು ಒಳರೋಗಿಗಳ ಆರೋಗ್ಯ ವಿಚಾರಣೆ ನಡೆಸಿದ ನಂತರ ಅಲ್ಲಿನ ತಾಲೂಕ ಆರೋಗ್ಯಾಧಿಕಾರಿ ಡಾ. ರಾಜಕುಮಾರ ಮತ್ತು ಮಕ್ಕಳ ತಜ್ಞ ಸಂತೋಷ ಪಾಟೀಲ್ ಅವರೊಂದಿಗೆ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
 ಜನರಿಗೆ ಚುನಾವಣೆಯಲ್ಲಿ ಆಶ್ವಾಸನೆ ನೀಡಿದಂತೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸದ್ಯ 7 ವೈದ್ಯರ ಹುದ್ದೆಗಳನ್ನು ನಿಯೋಜನೆ ಆಧಾರದ ಮೇಲೆ ಭರ್ತಿಗೊಳಿಸಲಾಗುವುದು. ಒಟ್ಟು 16 ವೈದ್ಯರ ಹುದ್ದೆಗಳಲ್ಲಿ ಕೇವಲ ಇಬ್ಬರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ವೈದ್ಯರ ಹುದ್ದೆಗಳನ್ನು ಭರ್ತಿಗೊಳಿಸುವುದಕ್ಕಾಗಿ ಆರೋಗ್ಯ ಸಚಿವರನ್ನು ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮತ್ತು ಆರೋಗ್ಯ ಆಯುಕ್ತರನ್ನು ಭೇಟಿ ಮಾಡಿ ವೈದ್ಯರ ಹುದ್ದೆಗಳನ್ನು ಭರ್ತಿಗೊಳಿಸಲಾಗುವುದು ಎಂದರು.
ವಾಜಪೇಯಿ ಆರೋಗ್ಯಶ್ರೀ ಯೋಜನೆ ಅಡಿಯಲ್ಲಿ ಬಡವರಿಗೆ ಅನುಕೂಲವಾಗಲೆಂದು ಹೈದ್ರಾಬಾದ್ ನಗರ ಪ್ರದೇಶದ ಸನ್ ಶಾನ್ ಆಸ್ಪತ್ರೆ, ಕೇರ್ ಆಸ್ಪತ್ರೆ, ಕಾಮನೆನಿ ಆಸ್ಪತ್ರೆ ಮತ್ತು ನಾರಾಯಣ ಹೃದಯ ಆಸ್ಪತ್ರೆ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಹೃದಯ ಆಸ್ಪತ್ರೆ, ಮೆಡಿವಿನ್ ಆಸ್ಪತ್ರೆ, ಮಹಾತ್ಮಗಾಂಧಿ ಕ್ಯಾನ್ಸರ್ ಆಸ್ಪತ್ರೆ ಮೀರಜ್ ಮುಂತಾದ ಆಸ್ಪತ್ರೆಗಳಲ್ಲಿ ಇದರ ಸೌಲಭ್ಯವನ್ನು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಸಂಚಾರಿ ಆರೋಗ್ಯ ಸೇವೆಯನ್ನು ನೀಡುವ ಕುರಿತು ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
  ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಕುಮಾರ, ವೈದ್ಯರಾದ ಸಂತೋಷ ಪಾಟೀಲ್, ಕಾಂಗ್ರೆಸ್  ಮುಖಂಡರಾದ ಕೆ.ಎಂ. ಬಾರಿ, ಬಸವರಾಜ ಹದನೂರ, ಅಬ್ದುಲ್ ಬಾಸೀತ್, ಶಿವಕುಮಾರ ಕೊಳ್ಳೂರ, ರಾಮಶೆಟ್ಟಿ ಪವಾರ, ಜಗದೀಶಸಿಂಗ್ ಠಾಕೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement