ಸೈದಾಪುರ; ವಾಸವಿ ಜಯಂತಿ ಸಂಭ್ರಮ
ಯಾದಗಿರಿ: ಇಲ್ಲಿನ ಸೈದಾಪುರದಲ್ಲಿ 4631ನೇ ವಾಸವಿ ಜಯಂತಿಯನ್ನು ಆರ್ಯವೈಶ್ಯ ಸೇವಾ ಸಂಘದ ವತಿಯಿಂದ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ 8ಕ್ಕೆ ವಾಸವಿ ಕನ್ನಿಕಾಪರಮೇಶ್ವರಿಯ ಭಾವಚಿತ್ರದೊಂದಿಗಿನ ಮೆರವಣಿಗೆ ವಿಶ್ವನಾಥ ಮಂದಿರದಿಂದ ಮಹಿಳೆಯರ ಕುಂಬ, ಕಳಸ ಹಾಗೂ ವಾಸವಿ ಹಾಡುಗಳೊಂದಿಗೆ ಮುಖ್ಯ ರಸ್ತೆಯ ಮೂಲಕ ವಾಸವಿ ವಿದ್ಯಾ ಸಂಸ್ಥೆಗೆ ಬಂದು ತಲುಪಿತು. ನಂತರ 10ಕ್ಕೆ ರಾಘವೇಂದ್ರ, ರಾಘು ರಾಂಪುರ, ಲಕ್ಮನಾರಾಯಣ ಪಾಲಾದಿ, ಹಣಮೇಶ ನರಹರಿ ಅವರಿಂದ ಮಹಾಮಂಗಳಾರತಿ ಹಾಗೂ ಧಾರ್ಮಿಕ ಕಾರ್ಯಗಳು ನಡೆದವು. ಮಹಿಳೆಯರಿಂದ ಕುಂಕಮ ಅರ್ಚನೆ ಹಾಗೂ ತೊಟ್ಟಲು ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಆರ್ಯವೈಶ್ಯ ಸೇವಾ ಸಂಘದ ಅಧ್ಯಕ್ಷ ಕೆ.ಪಿ. ಗೋವಿಂದಪ್ಪ, ಪತ್ತಿ ಕೃಷ್ಣಮೂರ್ತಿ, ಕಲಕೊಂಡ ನರಸಿಮ್ಲು, ವಿರೇಶ ಪೂರಿ, ದೇವಣ್ಣ ಗುಮಡಾಲ, ಕೆ.ಪಿ.ವಸಂತಕುಮಾರ, ಕೆ.ಬಿ.ಗೋವರ್ಧನ, ಕೆ.ಬಿ.ಬನ್ನಯ್ಯ, ವಿನೋದ ಬಾದಮಿ, ಡಾ.ಬಿ.ಟಿ.ಪಾಲಾದಿ, ಡಾ.ಎನ್.ಜಿ. ನಾಗೇಶ, ಕೆ.ಬಿ. ಯಂಕಮ್ಮ, ಶ್ವೇತಾ ರಾಘವೇಂದ್ರ ಪೂರಿ, ಕೆ.ಪಿ. ಸವಿತಾ ಹಾಗೂ ಆರ್ಯವೈಶ್ಯ ಸೇವಾ ಸಂಘದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.