ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮುಂಗಾರು ಹಂಗಾಮು ಬೀಜೋಪಚಾರ

Rashmi Kasaragodu
Updated On : 22 May 2013, 11:19 am

ಗುರುಮಠಕಲ್: ರೈತರು ತಮ್ಮ ಹೊಲಗಳ ಫಲವತ್ತತೆಯನ್ನು ಕಾಯ್ದುಕೊಳ್ಳಬೇಕಾದರೆ ಭೂ ಚೇತನ ಗೊಬ್ಬರಗಳಾದ ಸಾವಯವ ಗೊಬ್ಬರ, ತಿಪ್ಪೆ ಗೊಬ್ಬರ, ಹಟ್ಟಿ ಗೊಬ್ಬರ, ಕಾಂಪೋಸ್ಟ್ ಗೊಬ್ಬರ ಮತ್ತು ಅಗ್ರಿಗೋಲ್ಡ್ ಗೊಬ್ಬರವನ್ನು ಬಳಕೆ ಮಾಡಬೇಕೆಂದು ಗುರುಮಠಕಲ್ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿಗಳಾದ ಚಂದಯ್ಯ ಶಬಾದಿ ತಿಳಿಸಿದರು.
  ಅವರು ಮತಕ್ಷೇತ್ರದ ಕಂದಕೂರ ಗ್ರಾಮದಲ್ಲಿ ಮುಂಗಾರು ಹಂಗಾಮಿನ ಬೀಜೋಪಚಾರ ಕುರಿತು ಹಮ್ಮಿಕೊಂಡಿದ್ದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿ, ಬಿತ್ತುವ ಮುನ್ನ ಬೀಜೋಪಚಾರ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ರೈತರು ಯೋಚಿಸಿದರೆ ಉತ್ತಮ ಫಸಲು ಪಡೆಯಲು ಸಾಧ್ಯ ಎಂದರು.
  ರೈತರು ಸಾಧ್ಯವಾದಷ್ಟು ಸಾವಯವ ಗೊಬ್ಬರಗಳನ್ನು ಬಳಸಿ ಉತ್ತಮ ಫಸಲು ಪಡೆಯಲು ಸೂಚಿಸಿದರು. ರಾಜಕುಮಾರ, ನೀಲನಾಯ್ಕ ಸೇರಿದಂತೆ ಗ್ರಾಮದ ರೈತ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement