ಸಂಚಾರಕ್ಕೆ ಬಸ್ ಡಿಪೋ ಟಿನ್ ಶೀಟ್ಗಳೇ ಅಡ್ಡಿ
ಶಹಾಪುರ: ಕಳೆದ ಒಂದು ವರ್ಷದ ಹಿಂದೆ ಪ್ರಾರಂಭವಾದ ಶಹಾಪುರ ಬಸ್ ಡೀಪೋ ಕಾಂಪೌಂಡ್ ನಿರ್ಮಾಣದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಇದಕ್ಕಾಗಿ ತಂದು ಹಾಕಲಾದ ಟಿನ್ಗಳು ಗಾಳಿಯಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಅಧಿಕಾರಿಗಳಾರೂ ಗಮನಹರಿಸದ ಕಾರಣ ಸಂಚಾರಕ್ಕೆ ಅಡ್ಡಿಯಾಗಿದೆ.
ಬಸ್ ಡೀಪೋ ಕಾಂಪೌಂಡ್ನಿಂದ ಇಲ್ಲಿನ ಆಶ್ರಯ ಕಾಲೋನಿಗೆ ರಸ್ತೆ ಇದ್ದು ಬಿರುಗಾಳಿಗೆ ಈ ಟಿನ್ಗಳು ಹಾದಿಯುದ್ದಕ್ಕೂ ಜೋತು ಬಿದ್ದಿವೆ. ಈ ಕುರಿತು ಅಧಿಕಾರಿಗಳ ಗಮನಕ್ಕೂ ತಂದರೂ ಕಾಳಜಿಯಿಲ್ಲದಂತಾಗಿದೆ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಶೀಘ್ರಕಾಮಗಾರಿಯನ್ನು ಆರಂಭಿಸಿ ಸಮಸ್ಯ ನಿವಾರಿಸಬೇಕೆಂದು ಹೊಸ ಆಶ್ರಯ ಕಾಲನಿಯ ಜನರು ತಿಳಿಸಿದ್ದಾರೆ.