25 ರಂದು ಸಿಎಂ ಅಭಿಮಾನಿಗಳ ಪೂಜೆ
ಬೀದರ್: ಭಾಲ್ಕಿ ತಾಲೂಕಿನ ಬಾಳೂರ ಗ್ರಾಮದ ಸಿದ್ರಾಮಯ್ಯ ಅಭಿಮಾನಿಗಳ ಸಂಘದಿಂದ ಸಿದ್ರಾಮಯ್ಯನವರು ಮುಖ್ಯಮಂತ್ರಿಯಾದ ಹಿನ್ನಲೆಯಲ್ಲಿ ಮೇ 25ರಂದು ಗ್ರಾಮದ ಬೀರಲಿಂಗೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ.ಅಂದು ಸಂಜೆ 6.15ಕ್ಕೆ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಮುಖಂಡ ಪಂಡಿತರಾವ ಚಿದ್ರಿ ವಹಿಸುವರು.ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಜಿಲ್ಲಾ ಕುರುಬ ಗೊಂಡ ಸಮಾಜ ಅಧ್ಯಕ್ಷ ಶಿವರಾಜ ಮಲ್ಲೇಶಿ, ಭಾಲ್ಕಿ ಪುರಸಭೆ ಸದಸ್ಯ ಪಂಢರಿನಾಥ ಮೇತ್ರೆ ಹಾಗೂ ಶಿವಶರಣಪ್ಪ ಭತ್ರೆ, ತಾ. ಪಂ. ಸದಸ್ಯರಾದ ಶಿವಕುಮಾರ ದೇಶಮುಖ ಅಲ್ಲದೇ ಕಾರ್ಯಕ್ರಮದ ಸಂಯೋಜಕರಾದ ಶಿವಾನಂದ ಮಡ್ಡೆ, ಸಾಯಿನಾಥ ಚಿಮಕೋಡೆ, ನಾಗಗೊಂಡ ಹಾವಗಿ, ಭೀಮಗೊಂಡ ಮಡ್ಡೆ ಹಾಗೂ ಬಾಲಾಜಿ ಮಡ್ಡೆ ಪಾಲ್ಗೊಳ್ಳುವರು.